ನಾನು 15 ವರ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯೇ : CM ಸ್ಥಾನ ಕೊಟ್ರೆ ಬೇಡ ಅನ್ನಲ್ಲ : ಅಂಬರೀಶ್‌

ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಕಾಂಗ್ರೆಸ್‌ ನಾಯಕ, ನಟ ಅಂಬರೀಶ್‌ ಪ್ರತಿಕ್ರಿಯಿಸಿದ್ದಾರೆ. ಬಹಳ ವರ್ಷಗಳ ನಂತರ ರಾಜ್ಯದ ಪರ ತೀರ್ಪು ಬಂದಿದೆ. ಇಷ್ಟು ದಿನ ನಮ್ಮ ವಿರುದ್ದವಾಗಿಯೇ  ತೀರ್ಪು ಬಂದಿತ್ತು. ಇದು ನಿಜಕ್ಕೂ ಒಳ್ಳೆಯ ಸುದ್ದಿ. ನೀರಾವರಿ ಪ್ರದೇಶ ಹೆಚ್ಚಳಕ್ಕೂ ಅವಕಾಶ ಸಿಕ್ಕಿದೆ. ಸುಪ್ರೀಂ ತೀರ್ಪು ರಾಜ್ಯಕ್ಕೆ ಸ್ವಲ್ಪ ಉಸಿರುಕೊಟ್ಟಿದೆ ಎಂದಿದ್ದಾರೆ.

ಇದೇ ವೇಳೆ ಕರ್ನಾಟಕದ ಪರ ತೀರ್ಪು ಬಂದಿದ್ದಕ್ಕೆ ರಜಿನೀಕಾಂತ್‌ ವಿರೋಧಿಸಿದ್ದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಎಲ್ಲರಿಗೂ ಸ್ನೇಹಿತನೇ. ನದಿ ಜೋಡಣೆ ಯೋಜನೆ ಕೈಗೆತ್ತಿಕೊಂಡರೆ ಒಳ್ಳೆಯದು. ಅದನ್ನೇ ಅವರು ಹೇಳಿರೋದು. ನಾನು ಹಿಂದೆ ಕಾವೇರಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗ ಒಬ್ಬರೂ ಅಪ್ರಿಶಿಯೇಟ್ ಮಾಡಲಿಲ್ಲ. ನನ್ನ ತ್ಯಾಗದ ಬಗ್ಗೆ ಹೇಳಲೇ ಇಲ್ಲ. ಅದನ್ನ ಬಿಟ್ಟು ಅಂಬಿ ಅಲ್ಲಿ ಹೋದ ಇಲ್ಲಿ‌ಹೋದ ಅಂತ ತೋರಿಸ್ತೀರ ಎಂದು ಮಾಧ್ಯಮಗಳ ವಿರುದ್ದ ಹರಿಹಾಯ್ದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ವಿಚಾರ ಸಂಬಂಧ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. 224 ಸೀಟು ಗೆಲ್ತೇವೆ. ಜನ ಇದ್ರೆ ಎಲ್ಲರೂ ನಾಯಕರೇ. ಜನ ಇಲ್ಲವಾದ್ರೆ ಯಾರೂ ನಾಯಕರಲ್ಲ. ಮಂಡ್ಯ ಬಿಟ್ಟು ಬೇರೆ ಕಡೆ ಹೋದರೆ ನನ್ನನ್ನು ಹೇಡಿ ಎನ್ನುತ್ತಾರೆ. ಆದ್ದರಿಂದ ನಾನು ಈ ಬಾರಿಯೂ ಮಂಡ್ಯದಿಂದಲೇ ಸ್ಫರ್ಧಿಸುತ್ತೇನೆ. ನಾನು 15 ವರ್ಷದಿಂದಲೂ ಸಿಎಂ ಅಭ್ಯರ್ಥಿಯೇ ಕಣ್ರೀ. ಸಿಎಂ ಸ್ಥಾನ ಕೊಟ್ಟರೆ ಬೇಡ ಅನ್ನಲ್ಲ. ಆಸೆ ಪಟ್ಟರೆ ನಿರಾಸೆ, ಅದಕ್ಕೆ ಆಸೆಯನ್ನೇ ಪಡದಿದ್ರೆ ಒಳ್ಳೆಯದಲ್ವೇ ಎಂದಿದ್ದಾರೆ.

 

Leave a Reply

Your email address will not be published.