ಬ್ಯಾಂಕ್‌ಗೆ ವಂಚಿಸಿ ನೀರವ್‌ ಮೋದಿ ವಿದೇಶಕ್ಕೆ ಪಲಾಯನ : ED ಯಿಂದ ಸಮನ್ಸ್ ಜಾರಿ

ಮುಂಬೈ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 11,400 ಕೋಟಿ ರೂ ವಂಚಿಸಿರುವ ವಜ್ಯೋದ್ಯಮಿ ನೀರವ್‌ ಮೋದಿ ಹಾಗೂ ಆತನ ಉದ್ಯಮಪಾಲುದಾರರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಅಕ್ರಮ ಹಣ ಕಾಯ್ದೆಯಡಿ ಈ ಸಮನ್ಸ್ ಜಾರಿ ಮಾಡಲಾಗಿದ್ದು, ಈ ಕುರಿತು ಅವರು ಒಂದು ವಾರದೊಳಗೆ ಸಾಕ್ಷಿ ಹೇಳುವಂತೆ ಸೂಚಿಸಿದೆ.

ಅಲ್ಲದೆ ಪ್ರಕರಣ ಸಂಬಂಧ ನೀರವ್‌ ಮೋದಿಯ ಮುಂಬೈ, ದೆಹಲಿ, ಗುಜರಾತ್‌ನಲ್ಲಿರುವ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದ್ದು,  ಈ ವೇಳೆ ಐದು ಸಾವಿರ ಕೋಟಿಗೂ ಅಧಿಕ ಮೌಲ್ಯದ ವಜ್ರಾಭರಣ, ಚಿನ್ನಾಆಭರಣಗಳು ಪತ್ತೆಯಾಗಿವೆ. ನೀರವ್‌ ಹಾಗೂ ಅಕ್ರಮದಲ್ಲಿ ಭಾಗಿಯಾದವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳಲು ಇಡಿ, ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ಹೇಳಲಾಗಿದೆ.

Leave a Reply

Your email address will not be published.