ಅಂಬೇಡ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ : ಯುವಕನ ವಿರುದ್ದ ದೂರು ದಾಖಲು

ಕೊಪ್ಪಳ : ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಬರೆದು ಪೋಸ್ಟ್‌ ಮಾಡಿದ್ದಲ್ಲದೆ ಅಂಬೇಡ್ಕರ್‌ ವಿರುದ್ದ ಅಶ್ಲೀಲವಾಗಿ ಬರೆದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ.

ಆರೋಪಿಯನ್ನು ನಾಗರಾಜ ಮರಾಠಿ ಎಂದು ಹೆಸರಿಸಲಾಗಿದೆ. ಪಾಕಿಸ್ತಾನದ ಮಕ್ಕಳ ಚಿತ್ರವನ್ನು ಹಾಕಿ ಪಾಕಿಸ್ತಾನ್‌ ಜಿಂದಾಬಾದ್ ಎಂದು ಬರೆದಿದ್ದ. ಅಲ್ಲದೆ ಅಂಬೇಡ್ಕರ್‌ ಅವರ ಫೋಟೋ ಹಾಕಿ ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದ. ಇದನ್ನು ಗಮನಿಸಿದ ಕನಕಗಿರಿಯ ದಲಿತ ಸಂಘಟನೆಯ ಮುಖಂಡರು ನಾಗರಾಜ್‌ ವಿರುದ್ದ ದೂರು ದಾಖಲಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದು, ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com