ಕಾವೇರಿ ನದಿ ವಿವಾದ : ಕೊನೆಗೂ ಕರ್ನಾಟಕಕ್ಕೆ ಸಿಹಿಸುದ್ದಿ ಕೊಟ್ಟ ಸುಪ್ರೀಂ

ಬೆಂಗಳೂರು : ಕೊನೆಗೂ ಕಾವೇರಿ ನದಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬಿದ್ದಿದೆ. ಸುಪ್ರೀಂಕೋರ್ಟ್‌ ಕರ್ನಾಟಕದ ಜನರ ಪರ ನಿಂತಿದ್ದು, ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡಲು ಒಪ್ಪಿಗೆ ಸೂಚಿಸಿದೆ.

ಇಂದು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ವಿವಾದ ಸಂಬಂಧ  ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸಲ್ಲಿಸಿದ್ದ ಅರ್ಜಿಯನ್ನು ಕುರಿತು ತೀರ್ಪು ಪ್ರಕಟಿಸಿದೆ. ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಸಿದ್ದು, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀಡಲು ಒಪ್ಪಿಗೆ ಸೂಚಿಸಿದೆ.

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಸಮಾನ ಹಂಚಿಕೆ ಮಾಡಿಕೊಳ್ಳಬೇಕು. ಯಾವುದೇ ರಾಜ್ಯ ಒಂದು ನದಿಯ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್ ಆದೇಶದ ಮುಖ್ಯಾಂಶಗಳು :

ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ

ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಅಸ್ತು

1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದ ಸುಪ್ರೀಂಕೋರ್ಟ್

ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುವ ಜಾಗದಲ್ಲಿ 177 ಟಿಎಂಸಿ ನೀರು ಬಿಡುಗಡೆಗೆ ಸೂಚನೆ

ತಮಿಳುನಾಡಿಗೆ 14.05 ಟಿಎಂಸಿ ನೀರು ಕಡಿತ

ಬೆಂಗಳೂರಿಗೆ 4.75 ಟಿಎಂಸಿ ನೀರು ಹಂಚಿಕೆಗೆ ಆದೇಶ

ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ

ನದಿನೀರು ಹಂಚುವಾಗ ತಮಿಳುನಾಡಿನ 20 ಟಿಎಂಸಿ ಅಂತರ್ಜಲ ನೀರನ್ನು ಪರಿಗಣಿಸಬೇಕು

ಕೇರಳ, ಪುದುಚೇರಿಗೆ ನೀಡಿದ ನೀರು ಹಂಚಿಕೆ ಎತ್ತಿಹಿಡಿದ ಕೋರ್ಟ್​

ಕೇರಳದ ಪಾಲು 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ

50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ

ಮುಂದಿನ 15 ವರ್ಷಕ್ಕೆ ಈ ತೀರ್ಪು ಅನ್ವಯ

Leave a Reply

Your email address will not be published.