I Love Pakistan ಎಂದ ಕಾಂಗ್ರೆಸ್‌ ಮುಖಂಡ : ದೇಶದ್ರೋಹದ ಪ್ರಕರಣ ದಾಖಲು

ದೆಹಲಿ : ಐ ಲವ್‌ ಪಾಕಿಸ್ತಾನ ಎಂದು ಹೇಳಿದ್ದ ಕಾಂಗ್ರೆಸ್‌ನ ಉಚ್ಛಾಟಿತ ನಾಯಕ ಮಣಿಶಂಕರ್‌ ಅಯ್ಯರ್‌ ವಿರುದ್ದ ದೇಶದ್ರೋಹ  ಹಾಗೂ ಮಾನನಷ್ಟ ಪ್ರಕರಣ ದಾಖಲಾಗಿದೆ.

ಬಿಜೆಪಿಯ ಒಬಿಸಿ ವಿಂಗ್‌ ಮುಖ್ಯಸ್ಥ ಅಶೋಕ್‌ ಚೌಧರಿ, ಅಯ್ಯರ್‌ ವಿರುದ್ದ ಐಪಿಸಿ ಸೆಕ್ಷನ್‌ 124(ಎ), 500 ಹಾಗೂ 504ರ ಅಡಿಯಲ್ಲಿ ಕೋಟಾದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಕೆಲ ದಿನಗಳ ಹಿಂದೆ ಕರಾಚಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅಯ್ಯರ್ ಭಾಗಿಯಾಗಿದ್ದು, ಮಾತನಾಡುವ ವೇಳೆ ಐ ಲವ್‌ ಪಾಕಿಸ್ತಾನ್‌, ಯಾಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದಿದ್ದು, ಎಲ್ಲೆಡೆ ಇವರ ಮಾತು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಪಾಕಿಸ್ತಾನ ಹಾಗೂ ಭಾರತದ ಮಧ್ಯೆ ದ್ವಿಪಕ್ಷೀಯ ಮಾತುಕತೆಯ ಅಗತ್ಯವಿದೆ. ಇದಕ್ಕೆ ಪಾಕಿಸ್ತಾನ ಒಪ್ಪಿದ್ದರೂ, ಭಾರತ ಒಪ್ಪಿಲ್ಲ ಎಂದಿದ್ದು, ಇದರಿಂದ ಬಿಜೆಪಿಗೆ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಯ್ಯರ್‌ ವಿರುದ್ದ ಕೇಸ್ ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com