ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಸಿದ್ದರಾಮಯ್ಯ ಕೊನೆ ಮೊಳೆ ಹೊಡಿತಾರೆ : ಶೋಭಾ ಕರಂದ್ಲಾಜೆ

ದಾವಣಗೆರೆ : ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ಗೆಲ್ಲಲು ಸಿ ಎಂ ಗೆ ಧೈರ್ಯವಿಲ್ಲ‌. ಅದಕ್ಕಾಗಿ ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ಮಧ್ಯೆ ಬೆಂಕಿ ಇಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 13 ಬಜೆಟ್ ಮಂಡಿಸಿದ್ದೇನೆ ನಾನೇ ಹೀರೋ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹೀರೋ ಅಲ್ಲ ಖಳನಾಯಕ.  ರಾಜ್ಯದ ಜನತೆ ಅವರ ಅಭಿವೃದ್ಧಿ ನೋಡಿ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ. ಮೋದಿ-ಬಿಎಸ್ವೈ ಇದ್ದರೆ ನಮ್ಮ ರಾಜ್ಯ ದೇಶ ನಂಬರ್ 1 ಆಗಲಿದೆ.ಮಹಾದಾಯಿ ವಿಚಾರದಲ್ಲಿ ಮೋದಿರವರು ಮಾತನಾಡುವ ಪರಿಸ್ಥಿತಿ ಯಲ್ಲಿ ಇಲ್ಲ. ಟ್ರಿಬ್ಯುನಲ್‌ನಲ್ಲಿ  ಇರೋದ್ರಿಂದ ಪ್ರಧಾನಿ ಮಾತನಾಡುವಂತಿಲ್ಲ ಎಂದಿದ್ದಾರೆ.

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯಿಂದ ಬಿಜೆಪಿಗೆ ಯಾವುದೇ ಭಯವಿಲ್ಲ. ರಾಹುಲ್ ಅಧ್ಯಕ್ಷನಾಗಿ ಆಯ್ಕೆಯಾದಾಗ ದೇಗುಲಗಳಿಗೆ ಹೋಗಲಿಲ್ಲ. ಈಗ ಇಲ್ಲಿಗೆ ಬಂದು ದೇವಸ್ಥಾನ, ಮಸೀದಿ ಸುತ್ತುತ್ತಿದ್ದಾರೆ. ಹಿಂದೆ ಗುಜರಾತ್ ನಲ್ಲೂ ಟೆಂಪಲ್ ರನ್ ಮಾಡಿದ್ದರು. ಚುನಾವಣೆ ಗಾಗಿ ಕಾಂಗ್ರೆಸ್ ತಂತ್ರವಿದು. ರಾಹುಲ್ ಗಾಂಧಿ ಮೆಚುರ್ಡ್ ಪರ್ಸನ್ ಅಲ್ಲ. ಕಾಂಗ್ರೆಸ್ ಶವ ಪೆಟ್ಟಿಗೆಗೆ ಸಿದ್ದರಾಮಯ್ಯನೇ ಕೊನೆ ಮೊಳೆ ಹೊಡೆಯುತ್ತಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.

Leave a Reply

Your email address will not be published.