Vijay Hazare Trophy : ರೇಲ್ವೇಸ್ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

ಹಾಸನ ಜಿಲ್ಲೆಯ ಆಲೂರಿನಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ರೇಲ್ವೇಸ್ ವಿರುದ್ಧ ಕರ್ನಾಟಕ ತಂಡ 16 ರನ್ ಅಂತರದ ರೋಚಕ ಜಯ ಗಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 48.1 ಓವರುಗಳಲ್ಲಿ 257 ಕ್ಕೆ ಆಲೌಟ್ ಆಯಿತು.

ಕರ್ನಾಟಕದ ಪರವಾಗಿ ಮಯಂಕ್ ಅಗರವಾಲ್ 89, ಪವನ್ ದೇಶಪಾಂಡೆ 65 ಹಾಗೂ ಕೆ.ಗೌತಮ್ 25 ರನ್ ಗಳಿಸಿದರು. ರೇಲ್ವೇಸ್ ತಂಡದ ಅನುರೀತ್ ಸಿಂಗ್ 3 ಹಾಗೂ ಎಸಿಪಿ ಮಿಶ್ರಾ 3 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ್ದ ರೇಲ್ವೇಸ್ 47.1 ಓವರುಗಳಲ್ಲಿ 241ಕ್ಕೆ ಆಲೌಟ್ ಆಯಿತು. ಅನುರೀತ್ ಸಿಂಗ್ 59, ಅಂಕಿತ್ ಯಾದವ್ 51 ರನ್ ಗಳಿಸಿದರು. ಕರ್ನಾಟಕದ ಪ್ರಸಿಧ್ ಕೃಷ್ಣಾ 4, ಪ್ರದೀಪ್ ಟಿ 4 ಹಾಗೂ ರೋನಿತ್ ಮೋರೆ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com