CM ಬಜೆಟ್ ಸರಿಯಿಲ್ಲ : ನಾವು ಅಧಿಕಾರಕ್ಕೆ ಬಂದ್ಮೇಲೆ ಒಳ್ಳೆ ಬಜೆಟ್‌ ಮಂಡಿಸ್ತೀವಿ : ಈಶ್ವರಪ್ಪ

ನೆಲಮಂಗಲ: ಸಿದ್ದರಾಮಯ್ಯ ಸರ್ಕಾರದ ಈ ಬಾರಿಯ ಕೊನೆಯ ಬಜೆಟ್‌ ಕುರಿತು ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಕೊನೆ ಮುಖ್ಯಮಂತ್ರಿಯ ಕೊನೆ ಬಜೆಟ್ ಇದು.  ಬಜೆಟ್ ಮಂಡನೆ ಮಾಡುವ ನೈತಿಕ ಹಕ್ಕು ಮುಖ್ಯಮಂತ್ರಿ ಸಿದ್ದರಾಮಯ್ಯಗಿಲ್ಲ ಎಂದಿದ್ದಾರೆ.

ನೆಲಮಂಗಲ ಸಮೀಪದ ಪಾಲನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಅವರ ಸಮಾಧಾನಕ್ಕಾಗಿ ಈ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಹಿಂದುಳಿದ ವರ್ಗ ಹಾಗೂ ದಲಿತ ಜನರಿಗೆ ಮತ್ತೆ ಅನ್ಯಾಯ ಮಾಡಿದ್ದಾರೆ. ಕಾಟಾಚಾರಕ್ಕೆ ನನ್ನ ಸರ್ಕಾರ ಮುಗೀತು ಅಂತ ಹೀಗೆ ಮಾಡಿದ್ದಾರೆ.  ಈ ಬಜೆಟ್ ಜನರಿಗೆ ಉಪಯೋಗವಿಲ್ಲ. ಬಿ ಜೆ ಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಆಗ ಒಳ್ಳೆ ಬಜೆಟ್ ಮಂಡನೆ ಆಗಲಿದೆ ಎಂದಿದ್ದಾರೆ.

ಕಾವೇರಿ ತೀರ್ಪಿನ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ಕರ್ನಾಟಕ ಜನತೆಗೆ ಸಮಾಧಾನವಾದ ತೀರ್ಪು ತಂದಿದೆ. ಕಾವೇರಿಯ ಅನೇಕ ವರ್ಷಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರಿಂದ ನಿಜಕ್ಕೂ ಜನರಿಗೆ ಸಹಾಯವಾಗಲಿದೆ ಎಂದಿದ್ದಾರೆ.

Leave a Reply

Your email address will not be published.