ಈ ದರಿದ್ರ ಸಿದ್ದರಾಮಯ್ಯ ಗಣಿ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಿಲ್ಲ : S.R ಹಿರೇಮಠ್

ಬಾಗಲಕೋಟೆ : ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಂತಹವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಸಾಮಾಜಿಕ‌ ಕಾರ್ಯಕರ್ತ ಎಸ್ ಆರ್. ಹಿರೇಮಠ ಹೇಳಿಕೆ ನೀಡಿದ್ದಾರೆ. .

 

ಬಳ್ಳಾರಿ ಗಣಿ ಹಗರಣ ವಿಚಾರ ಸಂಬಂಧ ಮಾತನಾಡಿದ ಅವರು, ದರಿದ್ರ ಸಿದ್ದರಾಮಯ್ಯ ಗಣಿ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಿಲ್ಲ. ಕಳ್ಳ ಆನಂದ ಸಿಂಗ್, ಗಾಲಿ ಜನಾರ್ದನ ರೆಡ್ಡಿ, ನಾಗೇಂದ್ರಬಾಬು ಎಲ್ಲರ ಪಾತ್ರ ಬೇಲೆಕೇರಿ ಗಣಿ ಹಗರಣದಲ್ಲಿದೆ ಎಂದಿದ್ದಾರೆ. ಅಲ್ಲದೆ ಗಣಿ ಹಗರಣದಲ್ಲಿದ್ದ ಆನಂದ್ ಸಿಂಗ್ ಕಾಂಗ್ರೆಸ್ ಗೆ ಸೇರ್ಪಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ಎಲ್ಲ ಪಕ್ಷಗಳು ಒಂದೇ ಕುಟುಂಬದಂತೆ. ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಆನಂದ್ ಸಿಂಗ್ ನನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡಿದ್ದು ಅಚ್ಚರಿಯೇನಲ್ಲ.  ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ರಾಜ್ಯದಲ್ಲಿ ಕೋರ್ಟ್‌ ಅಲ್ಲ ಪೀಪಲ್ಸ್  ಕೋರ್ಟ್‌ ಬರಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.