Cricket : ಕೊಹ್ಲಿಗೆ ಜಾಕ್ ಕಾಲಿಸ್ ಸಲಹೆ : ಮಾಜಿ ಆಲ್ರೌಂಡರ್ ಹೇಳಿದ್ದೇನು..?

ದಕ್ಷಿಣ ಆಪ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಟ ಆಲ್ರೌಂಡರ್ ಗಳಲ್ಲಿ ಒಬ್ಬರು. ಹಲವು ವರ್ಷ ಎದುರಾಳಿ ತಂಡದವರಿಗೆ ತಲೆನೋವಾಗಿ ಪರಿಣಮಿಸುತ್ತಿದ್ದ ಆಟಗಾರ ಜಾಕ್ ಕಾಲಿಸ್, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಮನೋವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮನೋವೃತ್ತಿಯನ್ನು ನಿಯಂತ್ರಿಸಿಕೊಳ್ಳುವ ಅಗತ್ಯವಿದೆ. ಕೊಹ್ಲಿಯವರ ಆಕ್ರಮಣಕಾರಿ ಮನೋಭಾವ ವೈಯಕ್ತಿಕವಾಗಿ ಅವರಿಗೆ ಲಾಭದಾಯಕವಾಗಿದೆ. ಆದರೆ ತಂಡದ ಹಿತದೃಷ್ಟಿಯಿಂದ ನೋಡಿದಾಗ ಒಮ್ಮೊಮ್ಮೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆಎಂದಿದ್ದಾರೆ.

ಮುಂಚೆಯಿಂದಲೂ ಕೊಹ್ಲಿ ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ. ಬ್ಯಾಟ್ ಮಾಡುವಾಗ ಉತ್ತಮವಾಗಿ ರನ್ ಗಳಿಸಲು ಈ ಮನೋಭಾವ ಅವರ ನೆರವಿಗೆ ಬರುತ್ತದೆ. ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸುವಾಗ ಸ್ವಲ್ಪ ಇದನ್ನು ಕಡಿಮೆಗೊಳಿಸುವುದು ಉತ್ತಮಎಂದಿದ್ದಾರೆ.

‘ ನಾಯಕ ಎಲ್ಲ ಸಮಯದಲ್ಲಿಯೂ ಅಗ್ರೆಸಿವ್ ಆಗಿರಲು ಸಾಧ್ಯವಿಲ್ಲ. ನಾಯಕತ್ವದ ವಿಷಯದಲ್ಲಿ ಕೊಹ್ಲಿ ಇನ್ನೂ ಚಿಕ್ಕವರಿದ್ದಾರೆ. ದಿನಕಳೆದಂತೆ ಕೊಹ್ಲಿ  ಸ್ವಭಾವದಲ್ಲಿ ಮಾಗುತ್ತಾರೆ ಎಂದು ಭಾವಿಸುತ್ತೇನೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com