ಸುದ್ದಿಯ ಸೇರ್ಪಡೆಯೊಂದಿಗೆ 3ನೇ ವರ್ಷಕ್ಕೆ ‘ಸರಳ ಜೀವನ’ ದಾಪುಗಾಲು

ಬೆಂಗಳೂರು : ಕನ್ನಡದ ಮೊಟ್ಟಮೊದಲ ಇನ್​ಫೋಟೈನ್​ಮೆಂಟ್ ಚಾನೆಲ್ ಸರಳ ಜೀವನ ವಾಹಿನಿಗೆ ಯಶಸ್ವಿ 2 ಸಂವತ್ಸರಗಳನ್ನ ಪೂರೈಸಿದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಸರಳಜೀವನ ವಾಹಿನಿ  ಶುಭ ಸುದ್ದಿಯೊಂದನ್ನ ಹೊತ್ತು ನಿಮ್ಮ ಮುಂದೆ ಬಂದಿದೆ.  ಹೌದು, ಇನ್ಮುಂದೆ ಮಾಹಿತಿ, ಮನರಂಜನೆಯ ಜೊತೆಗೆ ಸರಳಜೀವನ ಚಾನೆಲ್​ನಲ್ಲಿ ರಾಜ್ಯದ ಸಮಗ್ರ ಸುದ್ದಿ ಸಹ ಪ್ರಸಾರವಾಗಲಿದೆ.

ಇದೇ ಫೆಬ್ರವರಿ 19ಕ್ಕೆ ಸರಳಜೀವನ ವಾಹಿನಿ ಮೂರನೇ ವರ್ಷಕ್ಕೆ ದಾಪುಗಾಲಿಡುತ್ತಿದ್ದು, ಈ ದಿನದಿಂದಲೇ ಸರಳಜೀವನ ಚಾನೆಲ್, ಮಾಹಿತಿ, ಮನರಂಜನೆಯ ಜೊತೆಗೆ ದಿನಕ್ಕೆ 4 ವಾರ್ತಾ ಸಂಚಿಕೆಗಳು ಸರಳಜೀವನ ವಾಹಿನಿಯಲ್ಲಿ ಪ್ರಸಾರವಾಗಲಿವೆ. ಮಾಹಿತಿ ಹಾಗೂ ಮನರಂಜನಾ ಪೂರ್ಣ ವಾಹಿನಿಯಾಗಿ ಈಗಾಗಲೇ ಜನಮೆಚ್ಚುಗೆ ಗಳಿಸಿರುವ ಸರಳಜೀವನ, ಸುದ್ದಿಯನ್ನು ನೀಡುವಲ್ಲೂ ಪರಿಶುದ್ಧತೆಯನ್ನ ಕಾಯ್ದುಕೊಳ್ಳಲಿದೆ. ಯಾವುದೇ ಸುದ್ದಿಯನ್ನ ವೈಭವೀಕರಿಸದೆ. ರಾಜ್ಯದ ಯಥಾವತ್ ಸುದ್ದಿಗಳನ್ನು ನಿಮ್ಮ ಮುಂದಿಡಲಿದೆ.

ಮಾಹಿತಿ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಸರಳಜೀವನ ವಾಹಿನಿ ತನ್ನದೇ ಛಾಪು ಮೂಡಿಸಿದ್ದು, ಭಾರತೀಯ ಪುರಾಣ, ಇತಿಹಾಸ, ಪ್ರವಾಸ ಕಥನ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧರಿಸಿದ ವಿಚಾರಪೂರ್ಣ ಕಾರ್ಯಕ್ರಮಗಳನ್ನು ಈಗಾಗಲೇ ವಾಹಿನಿ ಪ್ರಸಾರ ಮಾಡುತ್ತಿದೆ. ಈ ಮೂಲಕ ಕನ್ನಡದ ಇತರೇ ಸುದ್ದಿ ಹಾಗೂ ಮನರಂಜನಾ ವಾಹಿನಿಗಳ ಸಾಲಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸರಳ ಸುದ್ದಿ ಸಂಚಿಕೆಗಳು?
ಸಮಾಚಾರ ಸೌರಭ (Morning News):
ಅಂದಿನ ಸಂಭವನೀಯ ಸುದ್ದಿಗಳು ಹಾಗೂ ಹಿಂದಿನ ದಿನದ ಸುದ್ದಿ ಮುಖ್ಯಾಂಶಗಳನ್ನು ಹೊತ್ತು ಬರಲಿದೆ ಸರಳಜೀವನ ವಾಹಿನಿಯ ಸಮಾಚಾರ ಸೌರಭ.  ಪ್ರತಿದಿನ ಮುಂಜಾನೆ 8.00 ಗಂಟೆಗೆ ಈ ಬೆಳಗಿನ ಸುದ್ದಿ ಸಂಚಿಕೆ ಬಿತ್ತರಗೊಳ್ಳಲಿದೆ. ನಿಮ್ಮ ಬೆಳಗಿನ ಉಪಾಹಾರದ ಜೊತೆ ಸರಳವಾಹಿನಿಯ ಈ ಸುದ್ದಿ ಸಂಚಿಕೆ ರಾಜ್ಯದ ಸಮಗ್ರ ಸುದ್ದಿಯನ್ನು ನಿಮಗೆ ಉಣಬಡಿಸಲಿದೆ.

ಮಧ್ಯಂತರ ವರದಿ (Miday News):
ಇದು ಸರಳಜೀವನ ವಾಹಿನಿಯ ಮಿಡ್ ಡೇ  ಸುದ್ದಿಯೂಟ. ಪ್ರತಿದಿನ ಮಧ್ಯಾಹ್ನ 1 .00 ಗಂಟೆಗೆ ಮಧ್ಯಂತರ ವರದಿ ಪ್ರಸಾರವಾಗಲಿದ್ದು, ಈ ವಾರ್ತಾ ಸಂಚಿಕೆಯಲ್ಲಿ ಮಧ್ಯಾಹ್ನದವರೆಗಿನ ರಾಜ್ಯದ ಪ್ರಮುಖ ಸುದ್ದಿಗಳ ಸಮಗ್ರ ಚಿತ್ರಣ ನಿಮಗೆ ಸಿಗಲಿದೆ.

ನಮ್ಮೂರು ಸುದ್ದಿ (News from my town):  ಇದು ಸಂಪೂರ್ಣ ಗ್ರಾಮೀಣ ಸುದ್ದಿಯ ಹೂರಣ. ರಾಜ್ಯದ 30 ಜಿಲ್ಲೆಗಳ ಸಂಪೂರ್ಣ ಸುದ್ದಿ ಚಿತ್ರಣವನ್ನು “ನಮ್ಮೂರು ಸುದ್ದಿ” ಯಲ್ಲಿ ನಾವು ನಿಮಗೆ ನೀಡಲಿದ್ದೇವೆ.  ಸ್ಥಳೀಯ ಸುದ್ದಿಗಳಿಗಾಗಿಯೇ ಮೀಸಲಾಗಿರುವ ಈ ವಾರ್ತಾ ಸಂಚಿಕೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

ಸಮಗ್ರ ಸಮಾಚಾರ (Prime News):
ಪ್ರತಿದಿನ ರಾತ್ರಿ 10.00 ಗಂಟೆಗೆ ಸರಳ ಸಮಗ್ರ ಸಮಾಚಾರ ಪ್ರಸಾರವಾಗಲಿದೆ. ಇದರಲ್ಲಿ ರಾಜ್ಯ ಹಾಗೂ ದೇಶದ ರಾಜಕೀಯ ಬೆಳವಣಿಗೆ ಹಾಗೂ ಆ ದಿನದ ಸಂಪೂರ್ಣ ಸುದ್ದಿಗಳ ಚಿತ್ರಣ ನಿಮಗೆ ಲಭಿಸಲಿದೆ

ಈ ನಾಲ್ಕು ಸುದ್ದಿ ಸಂಚಿಕೆಗಳ ಜೊತೆಗೆ ಸರಳಜೀವನ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವನ್ನೂ ನಿಮಗಾಗಿ ರೂಪಿಸಿದೆ. ಫೆ.19ರಿಂದ ಅಮರ ಪ್ರೇಮ ಕಥೆಗಳು ಎಂಬ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಈ ಪ್ರೇಮ ಕಾವ್ಯ ನಿಮ್ಮನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲಿದೆ. ಇತಿಹಾಸ ಹಾಗೂ ಪುರಾಣಗಳ ಕಥೆಗಳನ್ನು ಆಧರಿಸಿ ಈ ಕಾರ್ಯಕ್ರಮ ರೂಪುಗೊಂಡಿದೆ.

ದಿನಕ್ಕೆ 4 ಸುದ್ದಿ ಸಂಚಿಕೆಗಳ ಮೂಲಕ ದೇಶ ಹಾಗೂ ರಾಜ್ಯದ ಸಂಪೂರ್ಣ ಹಾಗೂ ಸಮಗ್ರ ಸುದ್ದಿ ನೀಡುವುದು ನಮ್ಮ ಮುಖ್ಯ ಗುರಿ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್ ಹೆಡ್  ರಘುನಾಥ ರೆಡ್ಡಿ. ಕೇವಲ ಪ್ಲಾಶ್ ನ್ಯೂಸ್ ಹಾಗೂ ಬ್ರೇಕಿಂಗ್ ನ್ಯೂಸ್​ಗೆ ಸೀಮಿತವಾಗದೆ  ಮನರಂಜನೆಯ ನಡುವೆ 3 -5 ಗಂಟೆಗಳ ಅಂತರದಲ್ಲಿ  ಒಂದೊಂದು ನ್ಯೂಸ್ ಬುಲೆಟಿನ್​ಗಳನ್ನು ನೀಡುವುದು ನಮ್ಮ ಆಶಯ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್ ಹೆಡ್​​.

ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಆಧರಿಸಿ ಸರಳ ಜೀವನ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ವಿಭಿನ್ನ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿವೆ. ಭಾರತೀಯ ಇತಿಹಾಸವನ್ನು ಆಧರಿಸಿ ರೂಪಿಸಿರುವ ಹಿಸ್ಟೋರಿ-01 ಹಾಗೂ ಹಿಸ್ಟೋರಿ -2 ಕಾರ್ಯಕ್ರಮ ಜನಮನ್ನಣೆ ಗಳಿಸಿದೆ. ಮಾಹಿತಿ, ಮನರಂಜನೆ ಗಳ ಜತೆಗೆ ಸುದ್ದಿಯನ್ನೂ ನೀಡಲು ಇದು ಸುಸಂದರ್ಭ. ಈ ಹಿನ್ನೆಲೆಯಲ್ಲಿ ಮನರಂಜನೆ ಜತೆ ಸುದ್ದಿಯನ್ನೂ ನೀಡಲು ನಿರ್ಧರಿಸಿದ್ದೇವೆ. ಇದು ನಮ್ಮ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬುದು ನಮ್ಮ ನಂಬಿಕೆ ಎನ್ನುತ್ತಾರೆ -ವಾಹಿನಿಯ ಸಂಪಾದಕ ಎಂ.ಎಸ್.ರಾಘವೇಂದ್ರ.

ಸರಳವಾಸ್ತು ಕ್ಷೇತ್ರದ ಅಗ್ರಗಣಿ ಡಾ. ಶ್ರೀ ಚಂದ್ರಶೇಖರ್ ಗುರೂಜಿ ಅವರ ಮಾರ್ಗದರ್ಶನಲ್ಲಿ ನಡೆಯುತ್ತಿರುವ ಸರಳಜೀವನ ಚಾನೆಲ್, ವಾಸ್ತವಿಕ ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನ ಪ್ರೇಕ್ಷಕರಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಮನುಕುಲದ ಒಳಿತಿಗಾಗಿ ದುಡಿಯುವುದೇ ಸರಳಜೀವನ ವಾಹಿನಿಯ ಉದ್ದೇಶವಾಗಿದೆ.  ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ಸರಳಜೀವನ ಚಾನೆಲ್ ರಾಜ್ಯದ ಎಲ್ಲ ಕೇಬಲ್ ಹಾಗೂ ಡಿಟಿಎಚ್​ (ಏರ್​ಟೆಲ್​ -967, ವಿಡಿಯೋಕಾನ್ – 686, ರಿಲಯನ್ಸ್ ಬಿಗ್ ಟಿವಿ 836 ) ನೆಟ್​ವರ್ಕ್​ಗಳಲ್ಲೂ ಲಭ್ಯವಿದೆ.

Leave a Reply

Your email address will not be published.

Social Media Auto Publish Powered By : XYZScripts.com