BJP ಸಚಿವರಿಂದ ‘ಅ’ಸ್ವಚ್ಛ ಭಾರತ್‌ : ರಸ್ತೆ ಬದಿಯೇ ಮೂತ್ರ ವಿಸರ್ಜನೆ

ಜೈಪುರ : ಬಿಜೆಪಿ ಸಚಿವರೊಬ್ಬರು ರಾಜಸ್ಥಾನದ ಗುಲಾಬಿ ನಗರದ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದ್ದು, ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜಸ್ಥಾನದ ಆರೋಗ್ಯ ಸಚಿವ ಕಾಲಿಚಂದ್ರನ್‌ ಸರಾಫ್‌, ರಸ್ತೆ ಬದಿ ಕಾರು ನಿಲ್ಲಿಸಿ ಮೂತ್ರ ಮಾಡುತ್ತಿದ್ದರು. ಈ ವೇಳೆ ಯಾರೋ ಅದನ್ನು ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ. ಬಳಿಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಪ್ರಶ್ನಿಸಿದರೆ ಯಾರೂ ಮಾಡದ ತಪ್ಪೇನು ನಾನು ಮಾಡಿಲ್ಲ ಎಂದು ಸಚಿವರು ಹಾರಿಕೆಯ ಉತ್ತರ ನೀಡಿದ್ದಾರೆ.

ರಸ್ತೆ ಬದಿ ಮೂತ್ರ ಮಾಡಿದ ಸಾರ್ವಜನಿಕರಿಗೆ 200ರೂ ದಂಡ ವಿಧಿಸಲಾಗುತ್ತದೆ. ಆದರೆ ಈ ಬಗ್ಗೆ ಸಚಿವರನ್ನು ಕೇಳಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ಅಲ್ಲದೆ ಈ ಕುರಿತು ವಿರೋಧ ಪಕ್ಷಗಳು ಟೀಕೆ ಮಾಡಿದ್ದು, ಬಿಜೆಪಿಯ ಇಂತಹ ನಾಯಕರಿಂದ ತಪ್ಪು ಸಂದೇಶ ರವಾನೆಯಾಗುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಕೆಲಸ ಎಂದು ವಿರೋಧ ಪಕ್ಷದ ನಾಯಕರು ಗುಡುಗಿದ್ದಾರೆ.

Leave a Reply

Your email address will not be published.