ನನ್ನನ್ನು ಭೂಮಿಯೊಳಗೆ ಹೂತಾಕಿದ್ರೂ ನಾನು ಯಾರಿಗೂ ಜಗ್ಗಲ್ಲ : ಡಿಕೆಶಿ

ಕನಕಪುರ : ಐಟಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಏನು ಬೇಕಾದರೂ ಮಾಡಲಿ. ಭೂಮಿ ಒಳಗೆ ಬೇಕಾದ್ರೂ ಹೂತು ಬಿಡಲಿ. ನನಗೇನೂ ಚಿಂತೆಯಿಲ್ಲ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕನಕಪುರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮಾತನಾಡಿದ ಅವರು, ‘ ಐಟಿ ದಾಳಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಐಟಿ ದಾಳಿಯ ವೇಳೆ ಪೇಪರ್ ಹರಿದು ಸಾಕ್ಷ್ಯನಾಶ ಮಾಡಿದ್ದರ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಎಫ್ಐಆರ್ ಹಾಕಲು ಮುಂದಾಗಿದ್ದು ಈ ಬಗ್ಗೆ ಅವರು ಏನು ಬೇಕಾದರೂ ಮಾಡಲಿ ‘ ಎಂದಿದ್ದಾರೆ.

‘ ಕೇಂದ್ರ ಸರ್ಕಾರ ತೋಡಿರುವ ಖೆಡ್ಡಾಕ್ಕಾದ್ರೂ ಹಾಕಲಿ,, ಭೂಮಿ ಒಳಗೆ ಹೂತು ಬಿಡಲಿ ಅದರ ಬಗ್ಗೆ ನಾನು ಚಿಂತೆ ಮಾಡೋದಿಲ್ಲ. ಯಾರ್ ಯಾರಿಗೆ ಏನ್ ಖುಷಿ ಬೇಕೋ ಹಾಗೇ ಮಾಡಿಕೊಳ್ಳಲಿ ಎಂದಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಕೆಂಪೇಗೌಡ ಉತ್ಸವ ಹಾಗೂ ಜಿಲ್ಲಾ ದಶಮಾನೋತ್ಸವಕ್ಕೆ ಸಿದ್ದತೆ ನಡೆಸಲಾಗಿದೆ. ನೀತಿ ಸಂಹಿತೆ ಜಾರಿಯಾಗುವ ಮುನ್ನ ಆಚರಣೆ ಮಾಡುವ ಉದ್ದೇಶವಿದೆ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com