ಒಳ ಉಡುಪು ಧರಿಸಿ ವಿಡಿಯೋ ಮಾಡಿ ಪ್ರೇಮಿಗೆ ಕಳಿಸಿದ ಯುವತಿ : ಯುವಕನಿಂದ ಬ್ಲಾಕ್‌ಮೇಲ್‌

ಬೆಂಗಳೂರು ; ವ್ಯಾಲಂಟೈನ್ ಡೇ ಮುಗಿದಿದೆ. ತಮ್ಮ ತಮ್ಮ ಪ್ರೇಮಿಗಳಿಗೆ ವಿಭಿನ್ನ ಉಡುಗೊರೆ ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಬೆಂಗಳೂರಿನಲ್ಲೊಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಒಳಉಡುಪನ್ನು ಉಡುಗೊರೆ ನೀಡಿದ್ದಾನೆ. ಅಲ್ಲದೆ ಅದನ್ನು ಹಾಕಿಕೊಂಡು ವಿಡಿಯೋ ಮಾಡಿ ಕಳಿಸುವಂತೆ ಪೀಡಿಸಿದ್ದು, ಆತನ ಬಲವಂತಕ್ಕೆ ಉಡುಪು ಧರಿಸಿ ವಿಡಿಯೋ ಮಾಡಿ ಕಳಿಸಿದ್ದ ಪ್ರಿಯತಮೆಗೆ ಈಗ ಬ್ಲಾಕ್‌ ಮೇಲ್‌ ಮಾಡಿದ್ದಾನೆ.

ಈ ರೀತಿಯ ಉಡುಗೊರೆ ನೀಡಿದ ಆರೋಪಿಯನ್ನು ಜೋಶಿ ಎಂದು ಹೆಸರಿಸಲಾಗಿದೆ. ಈತ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ಪ್ರೇಮಿಗಳ ದಿನವಾದ್ದರಿಂದ ತಮ್ಮ ಪ್ರಿಯತಮೆಗೆ ಒಳ ಉಡುಪನ್ನು ಗಿಫ್ಟ್‌ ಮಾಡಿದ್ದಾನೆ. ಬಳಿಕ ಅದನ್ನು ಧರಿಸಿ ವಿಡಿಯೋ ಮಾಡಿ ಕಳಿಸುವಂತೆ ಒತ್ತಾಯಿಸಿದ್ದಾನೆ. ಈತ ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದ ಹುಡುಗಿ ಆ ಉಡುಪನ್ನು ಧರಿಸಿ ವಿಡಿಯೋ ಮಾಡಿ ಕಳುಹಿಸಿದ್ದಾಳೆ. ಬಳಿಕ ಆತ ಈ ವಿಡಿಯೋವನ್ನು ಯುವತಿಯ ಪೋಷಕರಿಗೆ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಹಣ ನೀಡದಿದ್ದರೆ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಈ ಹಿನ್ನೆಲೆಯಲ್ಲಿ ಪೋಷಕರು ಜೋಶಿ ವಿರುದ್ದ ದೂರು ನೀಡಿದ್ದು, ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಆರೋಪಿ ಜೋಶಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com