ಬಿಗ್‌ಬಾಸ್ ಚಂದನ್‌ ಶೆಟ್ಟಿಯನ್ನು ಕೈ ಬೀಸಿ ಕರೆಯುತ್ತಿದೆ Sandalwood : ಸಿಕ್ತು ಮತ್ತೊಂದು ಆಫರ್‌

ಬಿಗ್‌ಬಾಸ್‌ನಲ್ಲಿ ತನ್ನ ಪ್ರತಿಭೆಯನ್ನು ತೋರಿ ಜನರ ಮನಸ್ಸನ್ನು ಗೆದ್ದಿದ್ದ ರ್ಯಾಪರ್‌ ಚಂದನ್‌ ಶೆಟ್ಟಿಗೆ ಮನೆಯಿಂದ ಹೊರಬಂದ ಮೇಲೆ ಆಫರ್‌ಗಳ ಮೇಲೆ ಆಫರ್‌ ಬರುತ್ತಲೇ ಇದೆ.

ಇತ್ತೀಚೆಗಷ್ಟೇ ಅವರಿಗೆ ಮಾಸ್ಟರ್‌ ಡಾನ್ಸರ್‌ ಕಾರ್ಯಕ್ರಮದ ತೀರ್ಪುಗಾರರಾಗಿ ಆಫರ್‌ ಬಂದಿತ್ತು. ಸೋಶಿಯಲ್‌ ಮೀಡಿಯಾ ಸೇರಿದಂತೆ ಎಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಚಂದನ್‌ ಶೆಟ್ಟಿಗೆ ಈಗ ಸಿನಿಮಾವೊಂದರಿಂದ ಮತ್ತೊಂದು ಆಫರ್‌ ಬಂದಿದೆ.

ಹೌದು ನಿರ್ಮಾಪಕ ಮುನಿರತ್ನ ಅವರು ತಮ್ಮ ಮುಂದಿನ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವಂತೆ ಚಂದನ್ ಶೆಟ್ಟಿಗೆ ಆಫರ್‌ ನೀಡಿದ್ದಾರೆ. ಇದಕ್ಕೆ ಚಂದನ್‌ ಸಹ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಚಂದನ್‌ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಹವಾ ಮೂಡಿಸಲಿದ್ದಾರೆ.

Leave a Reply

Your email address will not be published.