America : ಶಾಲೆಯಿಂದ ಹೊರಹಾಕಿದ್ದಕ್ಕೆ ವಿದ್ಯಾರ್ಥಿಯಿಂದ ಶೂಟೌಟ್‌ : 17 ಮಂದಿ ಸಾವು

ವಾಷಿಂಗ್ಟನ್‌ : ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ ಒಟ್ಟು 17 ಮಂದಿ ಸಾವಿಗೀಡಾಗಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನ ಮಾರ್ಜರಿ ಸ್ಟೋನ್ ಮನ್ ಡಗ್ಲಾಸ್ ಪ್ರೌಢ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಅದೇ ಶಾಲೆಯ ವಿದ್ಯಾರ್ಥಿ 19 ವರ್ಷದ ನಿಕೋಲಾಸ್ ಕ್ರೂಜ್‌ ಎಂಬುವವನನ್ನು ಶಿಕ್ಷಕರು ಶಾಲೆಯಿಂದ ಹೊರಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಬುಧವಾರ ಮಧ್ಯಾಹ್ನ ಶಾಲೆಗೆ ಆಗಮಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಈತನನ್ನ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com