Valentines day Spl : “ಪ್ರೀತಿಯ ಭಾವದಿಂದ ಧನ್ಯತೆಯ ಕಡೆಗೆ……

“ಪ್ರೀತಿಗಾಗಿ ಒಂದು ದಿನ ಅದಕ್ಕಾಗಿ ಒಂದಿಷ್ಟು ಶುಭಾಶಯ ಹೇಳುವ ಪರಿ.” ಆದರೆ ನಾನಿಲ್ಲಿ ಈ ದಿನಕ್ಕಾಗಿ ಬರೆಯಬೇಕೆಂದರೆ ಏನೆಂದು ಯೋಚನೆ ಮಾಡುವ ವೇಳೆ  ನನಗೊಂದು ನನ್ನ ದೂರದ ಸಂಬಂಧಿಯೊಬ್ಬನದೇ ಅನುಭವ ಬರೆಯುವ ಮನಸ್ಸಾಯಿತು. ಅದನ್ನೇ ಇಲ್ಲ ಹೇಳ ಹೊರಟಿದ್ದೇನೆ.

ರಾಜು(ಕಾಲ್ಪನಿಕ ಹೆಸರು),ಓದಿನಲ್ಲಿ ಅಷ್ಟೇನೂ ಇಲ್ಲದ ಅವನಿಗೆ ಇತರೆ ಚಟುವಟಿಕೆಯಲ್ಲಿ ಮುಂದು. ಜೊತೆಗೆ ಮುದ್ದು ಮುಖ.ಸುಂದರ,ಶ್ರೀಮಂತ ಯುವಕ ಹೀಗಾಗಿ ಅನೇಕ ಹುಡಿಗಿಯರೊಂದಿಗೆ “ಲವ್ವಿ-ಡವ್ವಿ”ನಡೆದೇ ಇತ್ತು.ಆದರೆ ಕಾಲೇಜ್ ಸೇರಿದ ನಂತರ ಇದು ಇನ್ನೂ ಹೆಚ್ಚಾಯಿತು. ಆದರೆ ಅವನ ನಿಜವಾದ ಮನಸ್ಸು ಕದ್ದ ಚೆಲುವೆ ಅವನ ಮನಸ್ಸಿನ  ಆರಾಧ್ಯ ದೇವತೆಯಾಗಿದ್ದಳು. ಅವಳೇನೂ ದೂರದಲ್ಲಿ ಇದ್ದವಳಲ್ಲ: ಅವನ ಬೀದಿಯ ನಾಲ್ಕನೆ ಮನೆ.ಅವಳದೂ ಇವನದೇ ವಯಸ್ಸು.ಆದರೆ ಶಾಲೆ ಬೇರೆ-ಬೇರೆ. ಪದವಿ ವೇಳೆ ಒಂದೇ ಕಾಲೇಜಿಗೆ ಬಂದರು.ನೋಡಲು ಅಷ್ಟೇನೂ ಸುಂದರವಲ್ಲದಿದ್ದರೂ ಅವಳ ಹೈ-ಫ್ಯಾಷನ್ ಮಾತ್ರ ಎಲ್ಲರಿಗೂ ಆಕರ್ಷಕವಾಗಿ ಸೆಳೆಯುತ್ತಿದ್ದಳು. ಇವನೊಂದಿಗೆ ದಿನವೂ ಮಾತನಾಡುವಳು.ನಗುವಳು. ಇವನೂ ಅಷ್ಟೇ.ಆದರೆ ದಿನವೂ ಅವಳನ್ನು ಆಕರ್ಷಿಸಲು ಏನಾದರೂ ಹೊಸದನ್ನು ಮಾಡುತ್ತಿದ್ದನು. ಆದರೆ ಅವಳಿಗೆ “ನೀ ನೆಂದರೆ ನನಗೆ ಇಷ್ಟ ಕಣೆ” ಎಂದು ಹೇಳಲೂ ಭಯ. ಸಿನಿಮಾ ಹೀರೊ ಇದ್ದ ಹಾಗೆ ಇದ್ದ ಅವನ ನೋಡಿ ಅವಳಿಗೂ ಅದೇ ರೀತಿ ಅನುಭವ.ಆದರೆ ಸದಾ ತಮಾಷೆಯನ್ನೇ ಮಾಡುತ್ತಿದ್ದ ಅವನನ್ನು ನಂಬಲು ತಯಾರಿರಲಿಲ್ಲ.

ಹೀಗೆ ಕಣ್ಣಾ ಮುಚ್ಚಾಲೆ ರೀತಿ ನಡೆಯುತ್ತಿತ್ತು.ಪದವಿಯೂ ಮುಗಿದೇ ಹೋಯಿತು.ಸ್ವಂತ ಬಿಜಿನೆಸ್ಸು ಮಾಡುತ್ತಿದ್ದ ಅವನ ತಂದೆಯ ಅಂಗಡಿಯನ್ನೇ ನೋಡಿಕೊಳ್ಳುತ್ತಾ ನಡೆದ. ಆದರೆ ಆ ಹುಡುಗಿಗೆ ಅವರ ಮನೆಯಲ್ಲಿ ಗಂಡು ಹುಡುಕಲು ಪ್ರಾರಂಭಿಸಿದರು.ಇದನ್ನು ತಿಳಿದ ರಾಜು ಅವಳಿಗೆ ಧೈರ್ಯದಿಂದ ತನ್ನ ಮನಸ ಮಾತು ಹೇಳಿಯೇ ಬಿಟ್ಟ.ಅವಳು ಅದನ್ನೂ ತಮಾಷೆಯಂದು ಬಿಟ್ಟೇ ಬಿಟ್ಟಳು.ಅವಳಿಗೆ ಬೇರೆ ಕಡೇ ಗಂಡು ಗೊತ್ತಾಗಿ ಬಿಟ್ಟಿತು.ಆಗ ಅವನು ನಿಜವಾಗಿಯೂ ಹುಚ್ಚನಾಗಿಯೇ ಬಿಟ್ಟ.ಅವಳನ್ನು ಬೇಡಿಕೊಂಡ,ಕಾಡಿದ.ಆದರೆ ಆಗಲೆ ಸಮಯ ಮೀರಿತ್ತು.ಅವಳು ಮನಸಿದ್ದರೂ ಮನಸಿಲ್ಲದಂತೆ ತಾಯಿ ನೋಡಿದ ಬೇರೆ ವರನ ಜೊತೆ ಹೋಗುವಹ ಮನಸ್ಸು ಮಾಡಿಯಾಗಿತ್ತು.ಅವಳ ಮನಸ್ಸು ಕರಗಲೇ ಇಲ್ಲ.ಅವಳು ಒಪ್ಪಲೇ ಇಲ್ಲ.ಅವನು ಮಾತ್ರ ಅವಳನ್ನು ಮರೆಯಲಿಲ್ಲ.

ಅವಳು ಹೋದಳೆಂದು ಅವನೂ ಬೆಂಗಳೂರಿಗೆ ಹೋದ. ಅಲ್ಲಿ ಅವಳಿಗಾಗಿ ಹುಚ್ಚನಂತೆ ಹುಡುಕಾಡಿದ. ಅವಳೆಲ್ಲಿ ಸಿಗುತ್ತಾಳೆ.  ಅವನು ಮಾತ್ರ ಅವಳ ನೆನಪಲ್ಲಿ ಕಾಲ ಕಳೆಯುತ್ತಾ ಹಣ ಮುಗಿಯುವವರೆಗೂ ಇದ್ದ. ನಂತರ ಅವನ ತಂದೆ ಅವನನ್ನು ಕರೆ ತಂದ ಅವನಿಗಾಗಿ ಸಮಯ ನೀಡಿದರು. ಅವನ ನಿರ್ಧಾರ ಬದಲಾಯಿತು. ತನ್ನ ತಂದೆ-ತಾಯಿಗಾಗಿ ಬದುಕಲು ನಿರ್ಧರಿಸಿದ. ಅವರು ಹೇಳಿದ ಹುಡುಗಿಯ ಮದುವೆಯಾಗಲು ಒಪ್ಪಿದನು. ಈಗ ಕಥಗೊಂದು ಹೊಸ ತಿರುವು ಬಂತು. ತನ್ನ ಮನದನ್ನೆಯಾಗಿ ಬರುವವಳು ನೂರಾರು ಕನಸು ಕಾಣುವದನ್ನು ಊಹಿಸಿದ ಅದಕ್ಕಾಗಿ ಅವಳೊಡನೆ ಮಾತನಾಡಲು ಬಯಸಿದ.

ತನ್ನೆಲ್ಲ ಕಥೆ ಹೇಳಲು ನಿರ್ಧರಿಸಿದ. ಮಾತನಾಡಿಯೇ ಬಿಟ್ಟ. ಅವಳಿಂದ ಉತ್ತರ ನಿರೀಕ್ಷಿಸಿದ. ಅವಳ ಉತ್ತರ ಸ್ಪಷ್ಟವಾಗಿತ್ತು .ಇದನ್ನೇನೂ ನಿರೀಕ್ಷಿಸಿದ ಅವಳು ಸುಮ್ಮನಾದಳು. ಮತ್ತೇ ಸಾವರಿಸಿಕೊಂಡು ಹೇಳಿದಳು-“ನನ್ನ ತಂದೆ-ತಾಯಿ ಒಪ್ಪಿ ಮೆಚ್ಚಿದ ವರ ನೀವು.ಅಷ್ಟೇ ಅಲ್ಲ, ಸುಳ್ಳನ್ನು ಹೇಳದ ನಮ್ಮೀ ಭಾವಕ್ಕೆ ಮೆಚ್ಚಿದೆ ನಾನು. ಇನ್ನೂ ಮುಂದೆ ಮಾತ್ರ ನೀವು ನನ್ನವಾಗಿರಿ”ಎಂದು ಒಪ್ಪಿ ಮದುವೆಯಾದಳು. ಚೆನ್ನಾಗಿ ಬಾಳುತ್ತಿದ್ದಾರೆ.ಅವನ ಆ ಹಳೆ ಹುಡುಗಿ ತವರಿಗೆ ಬಂದಾಗ ಅವನನ್ನು ಚೆನ್ನಾಗಿಯೇ ಮಾತನಾಡಿಸುತ್ತಾಳೆ. ನಾನು ಈ ಕಥೆ ಹೇಳಿದ ಉದ್ದೇಶ ಒಂದೆ ಹುಡುಗ/ಹುಡುಗಿ ಒಂದು ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎಂದು ಯಾರನ್ನೋ ಪ್ರೀತಿಸಿ ಪರಿಸ್ಥಿತಿಯಂದ ಬೇರಾಗುವ ಸ್ಥಿತಿಯಲ್ಲಿ ಧೈರ್ಯದಿಂದ ಜೀವನ ಸಾಗಿಸುವದನ್ನು ಕಲಿಯಬೇಕಾಗಿದೆ.ನಾವು ನಮ್ಮರಿವರಿಗಾಗಿ ಬಾಳುವದನ್ನು ಕಲಿಯಬೇಕು.ಎಕೆಂದರೆ ಪ್ರೀತಿಯ ಮತ್ತೊಂದು ಹೇಸರೇ ತ್ಯಾಗ.”Happy valentance day for all” ಇನ್ನೊಂದು ಮಾತು ಪ್ರೀತಿ ಗಾಗಿ ಇದೊಂದೆ ದಿನವಲ್ಲ. ವರ್ಷಪೂರ್ತಿ ಪ್ರಿತಿಯ ದಿನಗಳೆ.

“ಪ್ರೀತಿಯೆಂಬ ಭಾವದಿಂದ,ಧನ್ಯತೆಯ ಹುಮ್ಮಸ್ಸು

ಸಾಗರದಂತೆ ಕಡಲುಕ್ಕಿ ಹೊಮ್ಮಲಿ,

ಸ್ವಾರ್ಥತೆಗಿಂತ,ನಿಷ್ಕಲ್ಮಶತೆ ಹರಡಲಿ

ಹೂ-ಮಕರದಂತೆ ಜೀವನ ಸಂದರವಾಗಲಿ”

LOVE

Leave a Reply

Your email address will not be published.

Social Media Auto Publish Powered By : XYZScripts.com