ರಾಹುಲ್‌ ಗಾಂಧಿ ಪ್ರವಾಸದಿಂದ ನಮಗೆಲ್ಲ ಹೊಸ ಚೈತನ್ಯ ಬಂದಿದೆ : ಕಾಗೋಡು ತಿಮ್ಮಪ್ಪ

ಉಡುಪಿ : ರಾಹುಲ್‌ ಗಾಂಧಿ ಪ್ರವಾಸದಿಂದ ಕಾಂಗ್ರೆಸ್‌ಗೆ ಹೊಸ ಚೈತನ್ಯ ಬಂದಿದೆ. ಮಾಧ್ಯಮಗಳೂ ರಾಹುಲ್‌ ಪ್ರವಾಸಕ್ಕೆ ದೊಡ್ಡ ಪ್ರಚಾರ ನೀಡಿದವು. ಬಿಜೆಪಿ ದೊಡ್ಡ ರಾಜಕೀಯ ಪಕ್ಷ. ನಮ್ಮದು ಒಂದು ಹಳೇ ರಾಜಕೀಯ ಪಕ್ಷ. ಮೋದಿ- ಅಮಿತ್ ಶಾ ರಾಜ್ಯಕ್ಕೆ ಬಂದ್ರೆ ನಮಗೇನೂ ನಷ್ಟ ಇಲ್ಲ. ಎಲ್ಲರೂ ಬಂದು ಪ್ರಚಾರ ಮಾಡಲಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಸಾಗರ ಕ್ಷೇತ್ರದಿಂದ ಜಯಮಾಲಾ ಸ್ಪರ್ಧೆ ವಿಚಾರ ಸಂಬಂಧ ಮಾತನಾಡಿದ ಅವರು, ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು. ಪಕ್ಷ ಹೇಗೆ ತೀರ್ಮಾನ ಮಾಡುತ್ತದೋ ಅದಕ್ಕೆ ನಾನು ಬದ್ಧ ಎಂದಿದ್ದಾರೆ. ಇನ್ನು ಬಹಮನಿ ಸುಲ್ತಾನ್‌ ಆಚರಣೆ ಕುರಿತಂತೆ ಪ್ರತಿಕ್ರಿಯಿಸಿದ್ದು, ಬಹುಮನಿ ಸುಲ್ತಾನ್ ಯಾರು?. ಬಹುಮನಿ ಸುಲ್ತಾನ್ ಆಚರಣೆ ಬಗ್ಗೆ ನನಗೆ ಗೊತ್ತಿಲ್ಲ.
ಆ ಕಾಲದಲ್ಲಿ ನಾನು ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಆಯಾಯ ಕಾಲದಲ್ಲಿ ಏನೇನು ಆಗಿದೆ ಅದು ಸರಿ. ರಾಜಮಹಾರಾಜರು ಸಾಮ್ರಾಜ್ಯ ವಿಸ್ತರಣೆ ಮಾಡ್ತಾ ಬಂದರು. ಆಳ್ವಿಕೆ ಮಾಡಿದ ರಾಜರಿಗೆ ಜನರ ಬಗ್ಗೆ ಕಾಳಜಿ ಇರುತ್ತಿರಲಿಲ್ಲ. ಈಗ ಅದನ್ನೇ ಆಚರಣೆ ಮಾಡಲು ಹೊರಟಿದ್ದಾರೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com