ಬಾಲಿವುಡ್‌ನತ್ತ ಮುಖ ಮಾಡಿದ ದಕ್ಷಿಣ ಭಾರತದ ಸುಂದರಿ ಶ್ರದ್ಧಾ ಶ್ರೀನಾಥ್‌

ಬೆಂಗಳೂರು : ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಜನರ ಮನಗೆದ್ದಿರುವ ಚಂದದ ಹುಡುಗಿ ಶ್ರದ್ಧಾ ಶ್ರೀನಾಥ್‌ ಈಗ ಬಾಲಿವುಡ್‌ಗೆ ಹಾರುವ ಸಮಯ ಬಂದಿದೆ.
ಶ್ರದ್ಧಾ ಶ್ರೀನಾಥ್ ಅವರ ಸಿನಿಮಾಗೆ ಟಿಗ್ಮಾಂಶು ದುಲಿಯಾ ನಿರ್ದೇಶನ ಮಾಡಲಿದ್ದು, ಈ ಸಿನಿಮಾದಲ್ಲಿ ಶ್ರದ್ಧಾ, ಅಲಿ ಫೈಜಲ್‌ ಅವರಿಗೆ ನಾಯಕಿಯಾಗಲಿದ್ದಾರೆ.


ಶಿವರಾತ್ರಿಯಂದೇ ಶ್ರದ್ಧಾ ಈ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದಾರೆ. ನಿಜಕ್ಕೂ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಸಂತೋಷವೆನಿಸುತ್ತಿದೆ. ದಕ್ಷಿಣದ ಚಿತ್ರಗಳೆಲ್ಲ ಒಂದು ರೀತಿಯಾದರೆ ಬಾಲಿವುಡ್‌ ಇದೆಲ್ಲದಕ್ಕಿಂತ ವಿಭಿನ್ನ. ಸಿನಿಮಾದ ನಾಯಕಿಗಾಗಿ ಆಡಿಶನ್‌ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದೆ. ಕೂಡಲೆ ನನಗೆ ಅವಕಾಶ ಸಿಕ್ಕಿದೆ. ಇದು ನಿಜಕ್ಕೂ ಸಂತೋಷದ ವಿಷಯ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com