WATCH : ‘ Rashke Qamar ‘ ಹಾಡಿಗೆ ಜೊತೆಯಾಗಿ ಹೆಜ್ಜೆ ಹಾಕಿದ ‘ ವಿರುಷ್ಕಾ ‘

ಕೆಲ ದಿನಗಳ ಹಿಂದೆ ‘ ಮೇರೆ ರಷ್ಕೆ ಕಮರ್ ‘ ಎಂಬ ಹಿಂದಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನಪ್ರಿಯತೆ ಗಳಿಸಿತ್ತು. ಪಾಕಿಸ್ತಾನಿ ಗಾಯಕ ನುಸ್ರತ್ ಫತೇ ಅಲಿ ಹಾಡಿದ ‘ರಷ್ಕೆ ಕಮರ್’ ಹಲವಾರು ಭಾಷೆಗಳಿಗೆ ರೀಮೇಕ್ ಮಾಡಲಾಗಿತ್ತು.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಹೆಜ್ಜೆ ಹಾಕಿದ್ದಾರೆ. ವಿರುಷ್ಕಾ ಜೋಡಿಯ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರ ಮೆಚ್ಚುಗೆ ಗಳಿಸುತ್ತಿದೆ.

ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com