ರಾ.ಗಾ ರಕ್ತ ಶುದ್ಧವೋ ಅಶುದ್ಧವೋ ಸಿದ್ದರಾಮಯ್ಯನವರೇ Test ಮಾಡಿ ಹೇಳಲಿ : ಅನಂತ್‌ ಹೆಗಡೆ

ಶಿರಸಿ : ರಾಹುಲ್ ಗಾಂಧಿ ರಕ್ತ ಶುದ್ದವೋ ಅಶುದ್ಧವೋ ಸಿದ್ದರಾಮಯ್ಯ ಅವರೇ ಟೆಸ್ಟ್ ಮಾಡಿ ಹೇಳಲಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಶಿರಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಬ್ರಾಹ್ಮಣ ಎಂದು ಹೇಳಿಕೊಂಡು ಮಾಂಸ ತಿಂದು ದೇವಸ್ಥಾನಕ್ಕೆ ಹೋದ ವಿಚಾರ ಸಂಬಂಧ ಮಾತನಾಡಿದ ಅವರು, ಈಗಲಾದರೂ ರಾಹುಲ್‌ಗೆ ರಾಷ್ಟ್ರೀಯತೆ ಜಾಗೃತಿ ಆಗಿರುವುದು ಸಂತೋಷದ ಸಂಗತಿ. ನಮ್ಮರಕ್ತದ ಪರಿಚಯ ಆಗುತ್ತಿರುವುದು ಹೆಮ್ಮೆಯ ಬೆಳವಣಿಗೆ. ಹಲವು ವರ್ಷದ ಹೋರಾಟದಿಂದ ಅವರಲ್ಲಿ ದೇವಾಲಯಗಳನ್ನು ಸುತ್ತುವ ಜಾಗೃತಿಯಾಗಿದೆ. ಅವರು ಮಾಂಸ ತಿಂದು ಹೋಗುವುದರಿಂದ ರಕ್ತ ಶುದ್ದವೋ ಅಶುದ್ಧವೋ ಹೇಳುವುದನ್ನ ಸಿದ್ದರಾಮಯ್ಯ ಅವರೇ ಪರೀಕ್ಷಿಸಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com