Mandya : ದೊಡ್ಡಗೌಡ್ರಿಗೇ ತಿರುಮಂತ್ರವಿಟ್ಟ JDS ನ ರೆಬೆಲ್ ಶಾಸಕರು….!

ಮಂಡ್ಯ : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ವಿರೋಧಿಗಳ ನಾಶಕ್ಕಾಗಿ ಜೆಡಿಎಸ್ ನ ವರಿಷ್ಠ ದೇವೇಗೌಡರು ಹಾಗೂ ಅವರ ಕುಟುಂಬಸ್ಥರು ಕಾಲಭೈರವನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದ್ದರು. ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಸೇರಿ ತಲಾ 3ರಂತೆ ಒಂಬತ್ತು ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು.

ಆದರೆ ಈಗ ದೇವೇಗೌಡರ ಗರಡಿಯಲ್ಲಿ ಪಳಗಿದ ಜೆಡಿಎಸ್ ನ ಮೂವರು ರೆಬಲ್ ಶಾಸಕರು ಗುರುವಿಗೆ ತಿರುಮಂತ್ರ ಇಡಲು ಮುಂದಾಗಿದ್ದಾರೆ. ಇದಕ್ಕಾಗಿ ತಾವು ಕೂಡ ಆದಿಚುಂಚನಗಿರಿಯ ಕಾಲ ಭೈರವೇಶ್ವರನಿಗೆ ಚುನಾವಣೆಗೂ ಮುನ್ನ ಅಮವಾಸ್ಯೆ ಪೂಜೆ ಮಾಡಿಸಿದ್ದಾರೆ. ಇಂದು ಆದಿಚುಂಚನಗಿರಿ ಕಾಲಭೈರವೇಶ್ವರ ಸನ್ನಿಧಾನದಲ್ಲಿ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮೊದಲನೆ ಅಮವಾಸ್ಯೆ ಪೂಜೆಯಲ್ಲಿ ಜೆಡಿಎಸ್ ರೆಬಲ್ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಹಾಗೂ ಬಾಲಕೃಷ್ಣ ಪಾಲ್ಗೊಂಡು ಶ್ರೀ ಕಾಲ ಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಸನ್ನಿಧಿಯಲ್ಲಿ ಸತತ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ ಕಾರಣ ದೇವೇಗೌಡರ ಕುಟುಂಬ ದೇವರ ಮೊರೆ ಹೋಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com