ರಾಹುಲ್ ನಾಟಿ ಕೋಳಿ ತಿಂದು ದೇವಾಲಯಕ್ಕೆ ಹೋಗಿಲ್ಲ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ‘ ಬಿಜೆಪಿಯವರು ಸುಳ್ಳು ಸುದ್ದಿ ಹೇಳೋದರಲ್ಲಿ ನಿಸ್ಸೀಮರು ‘ ಕಲಬುರಗಿಯಲ್ಲಿ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ. ‘ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಟಿ ಕೋಳಿ ತಿಂದು ದೇವಾಲಯಕ್ಕೆ ಹೋಗಿಲ್ಲ. ಬಿಜೆಪಿಯವರಿಗೆ ಆರೋಪ ಮಾಡೋಕೆ ಬೇರೆ ಯಾವ ವಿಷಯ ಸಿಗ್ತಿಲ್ಲ. ರಾಹುಲ್ ಬಗ್ಗೆ ಇಲ್ಲಸಲ್ಲದ ಆರೋಪದಲ್ಲಿ ತೊಡಗಿರುವುದು ಸರಿಯಲ್ಲ ‘ ಎಂದಿದ್ದಾರೆ.

‘ ಬಿಜೆಪಿ ಮುಖಂಡರು ಸ್ಲಂ ಗಳಲ್ಲಿ ವಾಸ್ತವ್ಯ ಮಾಡಿರುವುದು ಹಾಸ್ಯಾಸ್ಪದ. ದಲಿತರನ್ನು ಸ್ಲಂ ಜನರನ್ನು ಕಡೆಗಣಿಸಿದ್ದೇ ಬಿಜೆಪಿ, ಆರ್ ಎಸ್ ಎಸ್ ನವರು. ದಲಿತರ ಮನೆಗೆ ಹೋದೆ, ಟೀ ಕುಡಿದೆ, ಊಟ ಮಾಡಿದೆ ಎಂದು ಹೇಳುವುದು ಇಷ್ಟವಾಗದ ಸಂಗತಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com