ದ.ಕ.ದಲ್ಲಿ ಸಂಘಪರಿವಾರ ಹಾಗೂ ಮೈನಾರಿಟಿಗಳೆಂಬ ಭಯೋತ್ಪಾದಕ ಫ್ಯಾಕ್ಟರಿಗಳಿವೆ : ಗೃಹ ಸಚಿವ

ಕಲಬುರಗಿ : ಬಿಜೆಪಿ ಅಧಿಕಾರದಲ್ಲಿದ್ದಾಗ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಿದ್ದವು.  ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಅಪರಾಧ ಪ್ರಕರಣಗಳ ಅಂಕಿ ಸಂಖ್ಯೆಯನ್ನು ಬಿಜೆಪಿ ನೋಡಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಬಿಜೆಪಿಯವರು ವಿನಾಕಾರಣ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಅಪರಾಧ ಪ್ರಕರಣಗಳ ಕುರಿತು ಸಮಗ್ರ ವಿವರ ವಿಧಾನ ಸಭೆಯಲ್ಲಿ ತಿಳಿಸಿರುವೆ. ಹಳೇ ವೈಮನಸ್ಸು, ಸಾಲ, ವೈಯಕ್ತಿಕ ಕಾರಣಗಳಿಂದ ಕೆಲ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿವೆ. ಯಾರೇ ಕೊಲೆಯಾದರೂ ಅವರು ಸತ್ತ ಮೇಲೆ ಅವರ ಹೆಸರಿನಲ್ಲಿ ಬಿಜೆಪಿ ನೊಂದಣಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
13 ಜನ ಸಂಘ ಪರಿವಾರದವರ ಕೈಯಿಂದ ಕೊಲೆಯಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ ಭಯೋತ್ಪಾದಕರ ಎರಡು ಫ್ಯಾಕ್ಟರಿಗಳಿವೆ. ಒಂದು ಸಂಘ ಪರವಾರದವರದ್ದು ಇನ್ನೊಂದು ಮೈನಾರಿಟಿಯವರದ್ದು. ಎರಡೂ ಫ್ಯಾಕ್ಟರಿ ಮುಚ್ಚಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಂಘ ಪರಿವಾರದವರೇ ಪಿಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳನ್ನು ಬೆಳೆಸಿದ್ದಾರೆ. ಆದರೆ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದಾಗಿ ಆರೋಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com