ಹಜ್‌ ಸಬ್ಸೀಡಿ ಕಡಿತಗೊಳಿಸಿ, ಕ್ರಿಶ್ಚಿಯನ್ನರಿಗೆ ಉಚಿತ ಜೆರುಸೆಲೆಂ ಪ್ರವಾಸಕ್ಕೆ BJP ಚಿಂತನೆ !

ದೆಹಲಿ : ಮುಸ್ಲೀಮರ ಪವಿತ್ರ ಸ್ಥಳವಾದ ಹಜ್‌ಗೆ ತೆರಳಲು ನೀಡುತ್ತಿದ್ದ ಸರ್ಕಾರಿ ಅನುದಾನ ಕಡಿತಗೊಳಿಸಿದ ಬೆನ್ನಲ್ಲೇ ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸಕ್ಕೆ ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮೇಘಲಯ , ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ  ಚುನಾವಣೆ ನಡೆಯಲಿದ್ದು, ಈ ಮೂರು ರಾಜ್ಯಗಳಲ್ಲೂ ಬಿಜೆಪಿ ಗೆಲುವು ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಬಿಜೆಪಿ ಮುಖಂಡರು ಆಮಿಷ ಒಡ್ಡಿದ್ದಾರೆ.

ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ  ಕ್ರಿಶ್ಚಿಯನ್ನರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ. ಆದರೆ ಕೇವಲ ನಾಗಾಲ್ಯಾಂಡ್‌ ಕ್ರಿಶ್ಚಿಯನ್ನಿಗೆ ಮಾತ್ರ ಈ ಆಫರ್‌ ನೀಡಿದೆಯೋ ಅಥವಾ ದೇಶದ ಎಲ್ಲಾ ಕ್ರೈಸ್ತರು ಈ ಯೋಜನೆಯ ಫಲ ಪಡೆದುಕೊಳ್ಳಬಹುದೋ ಎಬುದರ ಬಗ್ಗೆ ಸ್ಪಷ್ಟವಾಗಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com