Cricket : ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಸರಣಿ ಜಯ

ಪೋರ್ಟ್ ಎಲಿಜಬೆತ್ ನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಪ್ರಿಕಾ ವಿರುದ್ಧ 73 ರನ್ ಜಯಗಳಿಸಿದೆ. ಇದರೊಂದಿಗೆ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಸರಣಿ ಜಯಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ ಸೇರಿಸಿತು. 17ನೇ ಏಕದಿನ ಶತಕ ಸಿಡಿಸಿದ ರೋಹಿತ್ ಶರ್ಮಾ 115 ರನ್ ಗಳಿಸಿದರು. ಆಫ್ರಿಕಾದ ಲುಂಗಿಸಾನಿ ಎಂಗಿಡಿ 4 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 42.2 ಓವರುಗಳಲ್ಲಿ 201 ಕ್ಕೆ ಆಲೌಟ್ ಆಯಿತು. ಹಾಶಿಮ್ ಆಮ್ಲಾ 71, ಹೆನ್ರಿಕ್ ಕ್ಲಾಸೆನ್ 39, ಡೇವಿಡ್ ಮಿಲ್ಲರ್ 36 ರನ್ ಗಳಿಸಿದರು. ಕುಲದೀಪ್ ಯಾದವ್ 4, ಚಹಲ್ 2, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com