ಆರೂವರೆ ಕೋಟಿ ಜನರ ಆಶಿರ್ವಾದವೇ ನನ್ನ ಆಸ್ತಿ : CM ಸಿದ್ದರಾಮಯ್ಯ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ದೇಶದ ಆರನೇ ಶ್ರೀಮಂತ ಸಿಎಂ ಎಂದು ಸಮೀಕ್ಷೆಯ ವರದಿ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಅವಿಭಕ್ತ ಕುಟುಂಬ. ಆ ಕುಟುಂಬದ ಆಸ್ತಿ ಜಾಸ್ತಿ ಇದೆ. ಆದರೆ ನನಗೆ ನನ್ನ ರಾಜ್ಯದ 6 ಕೋಟಿ ಜನರೇ ಆಸ್ತಿ ಎಂದಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಮೀಕ್ಷೆ ಪ್ರಕಾರ ನನ್ನ ಬಳಿ 13 ಕೋಟಿ ಮೌಲ್ಯದ ಆಸ್ತಿ ಇದೆಯಂತೆ. ನಾನು ಆರನೇ ಶ್ರೀಮಂತ ಸಿಎಂ ಅಂತೆ. ಆದರೆ ನಮ್ಮದು ಅವಿಭಕ್ತ ಕುಟುಂಬದ ಲೆಕ್ಕ. ಚುನಾವಣೆ ವೇಳೆ ಆ ಆಸ್ತಿಯನ್ನೇ ಘೋಷಿಸಿದ್ದೆ. ಅಣ್ಣ ಆಸ್ತಿ ವಿವರಗಳನ್ನೂ ಆಯೋಗಕ್ಕೆ ಸಲ್ಲಿಸಿದ್ದೆ. ಅದಕ್ಕೆ ಸಮೀಕ್ಷೆಯಲ್ಲಿ ಆ ರೀತಿ ವರದಿ ಬಂದಿದೆ.
ಅಣ್ಣನ ನಿಧನದ ಬಳಿಕ ನಾನು ಮನೆಯ ಯಜಮಾನನಾದೆ. ಈಗ ನಮ್ಮ ಕುುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ. ರಾಜ್ಯದ ಆರೂವರೆ ಕೋಟಿ ಜನರೇ ನನ್ನ ನಿಜವಾದ ಆಸ್ತಿ. ಅವರ ಆಶಿರ್ವಾದವೇ ನನಗೆ ಎಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com