ಭಗ್ನಪ್ರೇಮಿಯ ಹುಚ್ಚಾಟ : ಹುಡುಗಿ ನಿರಾಕರಿಸಿದ್ದಕ್ಕೆ ಈ ಬಾಡಿ ಬಿಲ್ಡರ್‌ ಇಂಥಾ ಕೆಲ್ಸ ಮಾಡೋದಾ..?

ಬಳ್ಳಾರಿ : ಪ್ರೇಮಿಗಳ ದಿನದಂದೇ ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಎದೆಗೆ ಚೂರಿ ಚುಚ್ಚಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಎದೆಗೆ ಗಂಭೀರ ಗಾಯವಾಗಿದ್ದು, ಯುವಕನನ್ನು ಹೊಸಪೇಟೆ ಸರ್ಕಾರಿ ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆಗೆ ಚೂರಿ ಚುಚ್ಚಿಕೊಂಡ ಯುವಕನನ್ನು ವೀರೇಶ (24) ಎಂದು ಹೆಸರಿಸಲಾಗಿದೆ.

ಈತ ಅನೇಕ ವರ್ಷಗಳಿಂದ ಹೊಸಪೇಟೆ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಂದು ಪ್ರೇಮಿಗಳ ದಿನವಾದ್ದರಿಂದ ತನ್ನ ಪ್ರೀತಿಯನ್ನು ಆಕೆಯ ಬಳಿ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಆಕೆ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವೀರೇಶ್‌ ಎದೆಗೆ ಚೂರಿ ಹಾಕಿಕೊಂಡಿದ್ದಾನೆ. ಕೂಡಲೆ ಸ್ಥಳದಲ್ಲಿದ್ದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲದೆ ಈತ ಬಾಡಿ ಬಿಲ್ಡರ್‌ ಆಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದ.

 

Leave a Reply

Your email address will not be published.

Social Media Auto Publish Powered By : XYZScripts.com