ಕೆಂಪು ಬಿಕಿನಿ ತೊಟ್ಟು ರೈತನ ಹೊಲ ಕಾಯ್ತಿದ್ದಾಳೆ ಸನ್ನಿ ಲಿಯೋನ್‌….!

ಅಮರಾವತಿ : ಆಂಧ್ರಪ್ರದೇಶದಲ್ಲಿ ರೈತನೊಬ್ಬ ತಾನು ಬೆಳೆದ ಬೆಳೆಗೆ ಜನರ ಕೆಟ್ಟ ದೃಷ್ಟಿ ತಾಗದಿರಲಿ ಎಂಬ ಕಾರಣಕ್ಕೆ ಸನ್ನಿ ಲಿಯೋನ್‌ಳ ಬಿಕಿನಿ ಫೋಟೋವನ್ನು ಹಾಕಿದ್ದಾರೆ. ಚಂಚು ರೆಡ್ಡಿ (45) ಎಂಬಾತ 10 ಎಕರೆ ಹೊಲದಲ್ಲಿ ಹೂಕೋಸು, ಎಲೆಕೋಸು ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದಿದ್ದ. ದಿನೇ ದಿನೇ ಆತನ ಹೊಲದಲ್ಲಿ ಇಳುವರಿ ಕಡಿಮೆಯಾಗತೊಡಗಿತು. ತನ್ನ ಹೊಲಕ್ಕೆ ಜನರ ದೃಷ್ಠಿ ತಾಗಿದೆ ಎಂಬ ಕಾರಣಕ್ಕೆ ಲಿಂಬೆಹಣ್ಣು, ತಾಯತ ಎಲ್ಲವನ್ನೂ ಮಾಡಿಸಿ ಕಟ್ಟಿದ್ದ. ಆದರೆ ಅದ್ಯಾವುದು ಫಲ ಕೊಟ್ಟಿರಲಿಲ್ಲ.

ಸ್ನೇಹಿತರ ಸಲಹೆಯಂತೆ ಚಂಚು ರೆಡ್ಡಿ ಕೊನೆಯ ಪ್ರಯತ್ನವಾಗಿ ಬಿಕಿನಿಯಲ್ಲಿರುವ ಸನ್ನಿ ಲಿಯೋನ್‌ ಅವರ ಫೋಟೋವನ್ನು ಹಾಕಿದ್ದಾನೆ. ಸನ್ನಿ ಫೋಟೋ ಹಾಕಿದ ದಿನದಿಂದ ಆತನ ಹೊಲದ ಇಳುವರಿ ಹೆಚ್ಚಿದೆಯಂತೆ.

ಇಷ್ಟು ದಿನ ದಾರಿಯಲ್ಲಿ ಓಡಾಡುವವರ ಕಣ್ಣೆಲ್ಲ ನನ್ನ ಹೊಲದ ಮೇಲಿರುತ್ತಿತ್ತು. ಆದರೆ ಸನ್ನಿ ಫೋಟೋ ಹಾಕಿದ ಮೇಲೆ ಎಲ್ಲರೂ ಸನ್ನಿ ಫೋಟೋ ನೋಡುತ್ತಾರೆಯೇ ವಿನಃ ನನ್ನ ತೋಟದ ಮೇಲೆ ದೃಷ್ಠಿ ಹಾಕುವುದಿಲ್ಲ. ಆದ್ದರಿಂದ ಹೊಲದ ಇಳುವರಿ ಚೆನ್ನಾಗಿದೆ ಎಂದು ಚಂಚು ರೆಡ್ಡಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com