ಪ್ರೇಮಿಗಳ ದಿನದ ಭವಿಷ್ಯ : ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ…

ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಈ ಬಾರಿ ಎಷ್ಟೇ ಕಷ್ಟವಾದರೂ ಇಷ್ಟಪಟ್ಟವರಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಅನೇಕರು ಅದಕ್ಕೆ ಹಿಂದೇಟು ಹಾಕುತ್ತಾರೆ. ನೀವು ಈ ದಿನ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಬಹುದೇ, ಪ್ರೀತಿ ಪ್ರೇಮದ ವಿಚಾರದಲ್ಲಿ ಜ್ಯೋತಿಷ್ಯ ಏನು ಹೇಳುತ್ತದೆ. ನಿಮ್ಮ ರಾಶಿಗೆ ಸಂಬಂಧ ಪಟ್ಟಂತೆ ನೀವು ಪ್ರೇಮ ನಿವೇದನೆ ಮಾಡಬಹುದೇ ಅಥವಾ ಬೇಡವೇ ಈ ಎಲ್ಲಾ ಮಾಹಿತಿಗಳನ್ನ ಈ ಲೇಖನದಲ್ಲಿ ನೋಡಬಹುದು.

ಮೇಷ ರಾಶಿ : ಈ ಬಾರಿ ಮೇಷ ರಾಶಿಯವರಿಗೆ ಮಾಡುವ ಕೆಲಸದಲ್ಲಿ ಶುಭ ಪ್ರಾಪ್ತವಾಗಲಿದೆ. ಪ್ರೇಮ ನಿವೇದನೆ ಮಾಡುವವರು ಧಾರಾಳವಾಗಿ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ರಾಶಿಯವರಿಗೆ ಗುರು ಹಾಗೂ ಶನಿ ಬಲ ಇರುವುದರಿಂದ ಪ್ರೇಮ ಫಲಿಸುತ್ತದೆ. ಆದರೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಇದಕ್ಕೆ ಆದಷ್ಟು ಕಡಿವಾಣ ಹಾಕಿದರೆ ಉತ್ತಮ.

ವೃಷಭ : ವೃಷಭ ರಾಶಿಯವರಿಗೂ ಈ ಬಾರಿ ಪ್ರೇಮ ನಿವೇದನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ. ಈ ರಾಶಿಯವರು ತಮ್ಮ ಪ್ರೀತಿಯನ್ನ ವ್ಯಕ್ತಪಡಿಸಬಹುದು. ಆದರೆ ಒಂದಿಷ್ಟು ವಿಚಾರದಲ್ಲಿ ತೊಡಕುಂಟಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ ಬೇರೆಯವರ ಗೌರವಕ್ಕೆ ಧಕ್ಕೆಯಾಗುವಂತಹ ನಡತೆಯನ್ನು ತೋರದಿದ್ದರೆ ಒಳಿತು.

ಮಿಥುನ : ಮಿಥುನ ರಾಶಿಯವರಿಗೆ ಈ ಬಾರಿಯ ಪ್ರೇಮಿಗಳ ದಿನ ಹೆಚ್ಚು ಶ್ರಯಸ್ಕರವಲ್ಲ. ನಿಮ್ಮಲ್ಲಿ ಚಾಕಚಕ್ಯತೆ, ನಿಮ್ಮ ನಗು, ನಿಮ್ಮ ಮಾತು ಈ ರೀತಿಯ ವಿಚಾರಗಳಿಗೆ ಜನ ಆಕರ್ಷಿತರಾಗುತ್ತಾರೆ. ಆದರೆ ಈ ರಾಶಿಯವರು ಸ್ವಲ್ಪ ಎಚ್ಚರದಿಂದ ಮುಂದಡಿ ಇಟ್ಟರೆ ಒಳಿತು. ಚಂಚಲ ಸ್ವಭಾವದ ಈ ರಾಶಿಯವರು ದೃಢ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಕರ್ಕಾಟಕ : ಈ ರಾಶಿಯವರಿಗೆ ಈ ಬಾರಿಯ ಪ್ರೇಮಿಗಳ ದಿನ ಅಷ್ಟು ಪ್ರಶಸ್ತವಾಗಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ನೀವು ಪ್ರೇಮ ನಿವೇದನೆ ಮಾಡಬಹುದು. ಆದರೆ ಅವರು ಒಪ್ಪಿಕೊಳ್ಳುವುದು ಕಷ್ಟ. ಹಾಗಂತ ನಿಮ್ಮ ಪ್ರಯತ್ನ ಬಿಡಬೇಡಿ. ಒಮ್ಮೆಲೆ ಅವರು ಒಪ್ಪದಿದ್ದರೂ, ನಿಮ್ಮ ಪ್ರೀತಿಗೆ ಎಂದಾದರೂ ಕರಗುತ್ತಾರೆ.

ಸಿಂಹ : ಈ ರಾಶಿಯವರಿಗೂ ಈ ಬಾರಿಯ ಪ್ರೇಮಿಗಳ ದಿನ ಶುಭಕರವಲ್ಲ. ಕಹಿ ಘಟನೆ ನಡೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಪಷಕರ ಮೂಲಕ ಪ್ರಯತ್ನಿಸಿರೆ ಪ್ರೀತಿಸಿದವರು ಸಿಗುವ ಸಾಧ್ಯತೆ ಇದೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ಅಭಿಪ್ರಾಯ.

ಕನ್ಯಾ : ಹೆಚ್ಚು ಮಾತುಗಾರರಾಗರುವ ನೀವು, ಅತೀ ವಿಶ್ವಾಸ ಇಡದಿದ್ದರೆ ಒಳಿತು. ಆಕೆ ಅಥವಾ ಅವನು ನನ್ನ ಪ್ರೀತಿಯನ್ನು ಒಪ್ಪಲೇಬೇಕೆಂಬ ಹಠ ಒಳ್ಳೆಯದಲ್ಲ. ಹಾಗಂತ ನಿಮ್ಮ ಪ್ರೇಮ ನಿವೇದನೆಗೇನೂ ತೊಂದರೆಯಾಗುವುದಿಲ್ಲ. ಜಾಗರೂಕತೆಯಿಂದ ಇದ್ದರೆ ಒಳಿತು.

ತುಲಾ : ಈ ರಾಶಿಯವರು ಎಚ್ಚರದಿಂದಿದ್ದರೆ ಒಳ್ಳೆಯದು. ತಪ್ಪು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಪ್ರೀತಿಯನ್ನು ಒಪ್ಪಿಕೊಂಡಿದ್ದೇ ಆದರೆ, ಕೆಲ ದಿನ ಕಾದು ಆ ವ್ಯಕ್ತಿಯ ಗುಣಗಳನ್ನು ಅರ್ಥ ಮಾಡಿಕೊಂಡು ಮುಂದುವರಿಯುವುದು ಒಳಿತು. ನೀವು ಜವಾಬ್ದಾರಿ ಇರುವವರಾದ್ದರಿಂದ ಅಳೆದು ತೂಗಿ ನಿರ್ಧಾರಕ್ಕೆ ಬನ್ನಿ.

ವೃಶ್ಚಿಕ : ಈ ರಾಶಿಯವರು ಪ್ರೀತಿ-ಪ್ರೇಮದಿಂದ ದೂರವಿದ್ದರೆ ಒಳಿತು. ಪೋಷಕರನ್ನು ಎದುರು ಹಾಕಿಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿದ್ದು, ಸಾಧ್ಯವಾದಷ್ಟು ಪೋಷಕರ ಬಗ್ಗೆ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ.

ಧನಸ್ಸು : ಈ ರಾಶಿಯವರಿಗೆ ನಾಚಿಕೆ ಜಾಸ್ತಿ. ನಾಚಿಕೆ ಬದಿಗಿಟ್ಟು ಪ್ರೇಮ ನಿವೇದನೆ ಮಾಡಿದ್ದೇ ಆದಲ್ಲಿ ನಿಮ್ಮ ಪ್ರೀತಿ ಯಶಸ್ಸು ಕಾಣುತ್ತದೆ. ಆದರೆ ಹೇಳಿಕೊಳ್ಳುವ ಧೈರ್ಯ ಮಾಡಬೇಕು.

ಮಕರ : ಈ ರಾಶಿಯವರಿಗೆ ದ್ವಂದ್ವ ಜಾಸ್ತಿ. ಆದರೆ ಆತುರಪಡಬೇಡಿ. ನಿಮ್ಮ ಪ್ರೀತಿಗೆ ನಾಳೆಯೇ ಆಗಬೇಕೆಂದೇನಿಲ್ಲ. ಸಮಯ, ಪರಿಸರ ನೋಡಿಕೊಂಡು ಎಂದಾದರೂ ಪ್ರೇಮ ನಿವೇದನೆ ಮಾಡಬಹುದು. ಆಗ ಗೆಲುವು ನಿಮ್ಮದಾಗುತ್ತದೆ.

ಕುಂಭ : ಈ ರಾಶಿಯವರು ಸ್ವಲ್ಪ ಸೋಮಾರಿ. ನಿಮ್ಮ ಸೋಮಾರಿತನ ಬಿಟ್ಟು, ಖುಷಿಯಾಗಿ ಪ್ರೇಮ ನಿವೇದನೆ ಮಾಡಬಹುದು. ದೈವ ಬಲ ಹೆಚ್ಚಿಲ್ಲದ ಕಾರಣ ಶುದ್ಧ ಮನಸ್ಸಿನಿಂದ ದೇವರನ್ನು ಭಜಿಸಿದರೆ ಒಳ್ಳೆಯದಾಗುತ್ತದೆ.

ಮೀನ : ಈ ಬಾರಿಯ ಪ್ರೇಮಿಗಳ ದಿನ ನಿಮಗೆ ಸಿಹಿ ಸುದ್ದಿ ನೀಡುವುದಿಲ್ಲ. ಸಾಧ್ಯವಾದಷ್ಟು ದೂರವಿದ್ದರೆ ಒಳ್ಳೆಯದು. ಒಂದು ವೇಳೆ ಪ್ರೇಮ ನಿವೇದನೆ ಮಾಡಿದರೂ ಯಶಸ್ಸು ಸಿಗುತ್ತದೆ ಎಂಬ ಭರವಸೆ ಇಲ್ಲ. ಆದರೆ ದೈವಾನುಗ್ರಹ ನಿಮ್ಮ ಮೇಲಿದ್ದರೆ ನಿಮ್ಮ ಪ್ರೀತಿ ಯಶಸ್ವಿಯಾಗಬಹುದು.

 

Leave a Reply

Your email address will not be published.