ಮಂಚದ ಕೆಳಗೆ ಬಾಂಬ್‌ ಇಟ್ಟು ಕೈ ನಾಯಕನ ಹತ್ಯೆ : ಸ್ಫೋಟದ ತೀವ್ರತೆಗೆ ದೇಹ ಛಿದ್ರ..!

ನಾಲ್ಗೊಂಡ : ಮಂಚದ ಕೆಳಗೆ ಬಾಂಬ್‌ ಇಟ್ಟು ಸ್ಫೋಟಿಸಿ ಕಾಂಗ್ರೆಸ್‌ ನಾಯಕರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಾಲ್ಗೊಂಡ್‌ನ ತಿರುಮಲಗಿರಿ ಪ್ರದೇಶದಲ್ಲಿ ನಡೆದಿದೆ.

ಮೃತ ಕಾಂಗ್ರೆಸ್‌ ಮುಖಂಡನನ್ನು ಧರ್ಮಾನಾಯಕ್‌ ಎಂದು ಹೆಸರಿಸಲಾಗಿದೆ. ಸೋಮವಾರ ರಾತ್ರಿ ಧರ್ಮಾನಾಯಕ್‌, ಮನೆಯ ಎದುರಿನ ಮಂಚದ ಮೇಲೆ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಮಂಚದ ಕೆಳಗೆ ನಾಡ ಬಾಂಬ್‌ ಇಟ್ಟು ಸಿಡಿಸಿದ್ದು, ಸ್ಫೋಟದ ತೀವ್ರತೆಗೆ ಧರ್ಮಾನಾಯಕ್‌  ದೇಹ ಛಿದ್ರವಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನ ರವಾನಿಸಲಾಗಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ದಳಗ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಆತಂಕದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

Leave a Reply

Your email address will not be published.