ರಾತ್ರಿ ವೇಳೆ ಯಾವ ಶಿವಲಿಂಗವನ್ನು ಪೂಜಿಸಿದರೆ ಯಾವ ಫಲ ಪ್ರಾಪ್ತಿ : ಇಲ್ಲಿದೆ ಕಂಪ್ಲೀಟ್‌ Details

ಶಿವರಾತ್ರಿಯಂದು ಶಿವನನ್ನು ಆರಾಧನೆ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬುದು ತಿಳಿದೇ ಇದೆ. ಆದರೆ ಶಿವಲಿಂಗದಲ್ಲೂ ಅನೇಕ ವಿಧಗಳಿದ್ದು, ರಾತ್ರಿಯ ವೇಳೆ ಯಾವ ಶಿವಲಿಂಗವನ್ನು ಪೂಜೆ ಮಾಡುವುದಿಂದ ಯಾವ ಫಲ ಸಿಗುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವಿಧ ರೀತಿಯ ವಿಶೇಷ “ಶಿವಲಿಂಗಗಳು” ಮತ್ತು ಪೂಜೆಯ ಫಲ..

ಕಲ್ಲಿನ ಲಿಂಗ – ನಾನಾ ಶಿಲೆಗಳಿಂದ ಮಾಡಿದ್ದು – “ಮೋಕ್ಷಪ್ರಾಪ್ತಿ”ಯ ಫಲ..

ಪುಷ್ಪಲಿಂಗ – ಹೂವಿನಿಂದ ಮಾಡಿದ್ದು – ಯಶಸ್ಸು, ಸುಖ, ಶಾಂತಿ..

ದಾರುಲಿಂಗ – ಮರದಿಂದ ಮಾಡಿದ್ದು – ಇಷ್ಟಾರ್ಥ ಸಿದ್ಧಿ..

ಕೆಂಪುಚಂದನ – ಮರದಿಂದ ಮಾಡಿದ್ದು – ರೋಗಮುಕ್ತಿ, ಅಪಮೃತ್ಯು ನಿವಾರಣೆ..

ಕಾಶ್ಮೀರ ಲಿಂಗ – ಕುಂಕುಮ, ಕೇಸರಿ – ಆರೋಗ್ಯಭಾಗ್ಯ..

ಗಂಧದ ಲಿಂಗ – ಮರದಿಂದ ಮಾಡಿದ್ದು – ಗಂಧರ್ವಲೋಕ ಪ್ರಾಪ್ತಿ, ಆರೋಗ್ಯ ಭಾಗ್ಯ..

ಲೋಹಲಿಂಗ – ಯಾವುದಾದರೂ ಲೋಹದಿಂದ ಮಾಡಿದ್ದು – ಶತೃನಾಶ..

ಸೂರ್ಯಲಿಂಗ – ತಾಮ್ರದಿಂದ ಮಾಡಿದ್ದು – ಆರೋಗ್ಯಪ್ರಾಪ್ತಿ..

ಸುವರ್ಣಲಿಂಗ – ಚಿನ್ನದಿಂದ ಮಾಡಿದ್ದು – ಸ್ವರ್ಗಪ್ರಾಪ್ತಿ..

ರಜತಲಿಂಗ – ಬೆಳ್ಳಿಯಿಂದ ಮಾಡಿದ್ದು – ಪಿತೃದೋಷ, ಶಾಪ ನಿವಾರಣೆಯಾಗುವುದು..

ಸ್ಫಟಿಕಲಿಂಗ – ಸ್ಫಟಿಕದಿಂದ ಮಾಡಿದ್ದು – ಶಾಂತಿ, ನೆಮ್ಮದಿ ಕೊಡುತ್ತದೆ. ಬಿ‌.ಪಿ ಖಾಯಿಲೆ ಬೇಗ ವಾಸಿಯಾಗುತ್ತದೆ..

ಶರ್ಕರಲಿಂಗ – ಸಕ್ಕರೆಯಿಂದ ಮಾಡಿದ್ದು – ಸಕ್ಕರೆ ಖಾಯಿಲೆ ನಿವಾರಣೆ ಹಾಗೂ ಸಂತೋಷ ನೀಡುತ್ತದೆ..

ದೂರ್ವಾಲಿಂಗ – ಗರಿಕೆ – ಅಪಮೃತ್ಯು ನಿವಾರಣೆ, ರೋಗ ನಿವಾರಣೆ..

ಮೃತ್ತಿಕ ಲಿಂಗ – ಮಣ್ಣಿನಿಂದ ಮಾಡಿದ್ದು – ದೇವರಲ್ಲಿ ಭಕ್ತಿ ವೃದ್ಧಿ, ಆರೋಗ್ಯ ಭಾಗ್ಯ..

ಲವಣ ಲಿಂಗ – ಉಪ್ಪಿನಿಂದ ಮಾಡಿದ್ದು, – ಋಣಭಾದೆ ನಿವಾರಣೆ..

ಗೋಮಯ ಲಿಂಗ – ಬಿಳಿ ಹಸುವಿನ ಸಗಣಿ – ಸಕಲ ಪಾಪನಾಶ, ಇಷ್ಟಾರ್ಥ ಸಿದ್ಧಿ..

ತಂದುಲ ಲಿಂಗ – ಅಕ್ಕಿರಾಶಿಯ ಶಿವಲಿಂಗ – ಸಂತಾನಭಾಗ್ಯ, ಸರ್ವಸಮಸ್ಯೆ ನಿವಾರಣೆ..

ಹರಿದ್ರಾಲಿಂಗ – ಅರಿಸಿನದಿಂದ ಮಾಡಿದ್ದು – ವಿವಾಹದೋಷಗಳ ನಿವಾರಣೆಯಾಗಿ ವಿವಾಹವಾಗುವುದು..

ಕುಂಕುಮ ಲಿಂಗ – ಕುಂಕುಮದಿಂದ ಮಾಡಿದ್ದು – ಸಕಲ “ದೃಷ್ಟಿದೋಷ” ನಿವಾರಣೆ ..

ಕೂಷ್ಮಾಂಡಲಿಂಗ – ಬಿಳಿ ಕುಂಬಳಕಾಯಿಯನ್ನು ಪೂಜಿಸುವುದು – ಅಪಮೃತ್ಯು ನಿವಾರಣೆ ಹಾಗೂ ಸಕಲಪಾಪ ನಿವಾರಣೆಯಾಗುವುದು..

Leave a Reply

Your email address will not be published.

Social Media Auto Publish Powered By : XYZScripts.com