ಪೋಖ್ರಾನ್‌ನಲ್ಲಿ Bomb Blast : ದಾವಣಗೆರೆ ಮೂಲದ ಯೋಧ ನಿಧನ

ದಾವಣಗೆರೆ : ರಾಜಸ್ಥಾನದ ಪೋಖ್ರಾನ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಆದ ಹಿನ್ನೆಲೆಯಲ್ಲಿ ದಾವಣಗೆರೆ ಮೂಲದ ಯೋಧ ಸಾವಿಗೀಡಾದ ಘಟನೆ ನಡೆದಿದೆ. ಮೃತ ಯೋಧನನ್ನು ಹರಿಹರದ ಜಾವಿದ್‌ (33) ಎಂದು ಹೆಸರಿಸಲಾಗಿದೆ.

ಜಾವಿದ್‌, ಆರ್ಮಿ ಮದ್ರಾಸ್ ಇಂಜಿನಿಯರಿಂಗ್‌ ಗ್ರೂಪ್‌ನಲ್ಲಿ ಸೋಮವಾರ ಸಂಜೆ ತರಬೇತಿ ಪಡೆಯುತ್ತಿದ್ದ ವೇಳೆ ಬಾಂಬ್‌ ಬ್ಲಾಸ್ಟ್ ಆದ ಕಾರಣ ಜಾವಿದ್‌ ಮೃತಪಟ್ಟಿದ್ದಾರೆ. ಅಲ್ಲದೆ ಇನ್ನೊಬ್ಬ ಯೋಧನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಜಾವಿದ್‌ಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಹರಿಹರಕ್ಕೆ ಬಂದು ಹೋಗಿದ್ದರು.

ನಾಳೆ ಬೆಳಗ್ಗೆ 11 ಗಂಟೆಗೆ ಜೋಧ್‌ಪುರದಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಮೃತದೇಹ ಬರಲಿದ್ದು, ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯ ನಡೆಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com