ಮಹಾ ಶಿವರಾತ್ರಿ : ಈ ಮೂರು ರಾಶಿಯವರಿಗೆ ಇಂದು ಕಾದಿದೆ ಭಾರೀ ಅದೃಷ್ಟ…!

ಇಂದು ಮಹಾಶಿವರಾತ್ರಿ. ಇಂದು ಇವ ಕೈಲಾಸದಿಂದ ಭೂಮಿಗೆ ಇಳಿದು ಬರುತ್ತಾನೆ ಎಂಬ ನಂಬಿಕೆ ಇದ. ಇದೊಂದು ಅವಕಾಶಕ್ಕಾಗಿ ಅದೆಷ್ಟೋ ಶಿವಭಕ್ತರು ಕಾಯುತ್ತಿರುತ್ತಾರೆ.ಈ ದಿನವನ್ನು ಶಿವ-ಪಾರ್ವತಿಯರ ಮದುವೆಯ ದಿನವೆದೂ ಪುರಾಣಗಳು ಹೇಳುತ್ತವೆ.

ಮಂಗಳವಾರ ಶಿವರಾತ್ರಿ ಹಬ್ಬ ಬಂದರೆ ಅದು ವಿಶಿಷ್ಟ ಹಾಗೂ ಲಾಭದ ಸಂಕೇತ ಎಂದೂ ಹೇಳಲಾಗುತ್ತದೆ. ಮಂಗಳವಾರ ಹನುಮಂತನ ದಿನ ಎಂದು ಹೇಳಲಾಗುತ್ತಿದ್ದು, ಶಿವ ಹಾಗೂ ಹನುಮಂತ ಒಂದೇ ರೂಪವೆಂದೂ ಪರಿಗಣಿಸುಲುದಾಗಿ ಜ್ಯೋತಿಷಿಗಳು ಹೇಳುತ್ತಾರೆ.

ಈ ದಿನ ಯಾವ ಯಾವ ರಾಶಿಯವರಿಗೆ ಅನುಕೂಲ ಎಂಬುದನ್ನು ನೋಡೋಣ

ಮೇಷ : ಶಿವರಾತ್ರಿಯ ದಿನ ಮೇಷ ರಾಶಿಯವರಿಗೆ ಶುಭ ದಿನವಾಗಿದ್ದು, ಹಣದ ಸಮಸ್ಯೆ ದೂರವಾಗಿ ಆರ್ಥಿಕ ಸಂಪತ್ತು ವೃದ್ಧಿ ಹೊಂದುತ್ತದೆ. ಅಲ್ಲದೆ ಇಂದಿನಿಂದ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ ಮೂಡುತ್ತದೆ. ಇಂದು ಭಕ್ತಿಯಿಂದ ಶಿವನ ಪೂಜೆ ಮಾಡಿ, ಉಪವಾಸ ವ್ರತ ಕೈಗೊಂಡಲ್ಲಿ, ಪಾರ್ವತಿ ಪ್ರಸನ್ನಳಾಗಿ, ವಿದ್ಯೆ, ಐರ್ಶರ್ಯ ಹೆಚ್ಚುವುದಾಗಿ ಹೇಳಲಾಗುತ್ತದೆ.

ತುಲಾ : ತುಲಾ ರಾಶಿಯವರಿಗೆ ಶಿವನ ಬಗ್ಗೆ ವಿಶೇಷ ಭಕ್ತಿ ಇರುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶಿವ ಈ ರಾಶಿಯವರ ಆರಾಧ್ಯ ದೈವವಾಗಿದ್ದು, ಪ್ರತಿನಿತ್ಯಕ್ಕಿಂತ ಶಿವನನ್ನು ಹೆಚ್ಚಿಗೆ ಆರಾಧಿಸುತ್ತಾರೆ. ಅಲ್ಲದೆ ಭಕ್ತರಿಗೆ ಕೇಳಿದ್ದನ್ನು ನೀಡುವ ಶಿವನನ್ನು ಇಂದು ತುಲಾ ರಾಶಿಯವರು ಭಕ್ತಿಯಿಂದ ಆರಾಧನೆ ಮಾಡಿ, ದಾನ ಧರ್ಮಗಳನ್ನು ಮಾಡಿದ್ದಲ್ಲಿ ಶಿವ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ.

ಮೀನ ರಾಶಿ : ಮೀನ ರಾಶಿಯವರಿಗೂ ಶಿವರಾತ್ರಿ ವಿಶೇಷ ದಿನವಾಗಿದ್ದು, ವ್ಯಾಪಾರ, ವ್ಯವಹಾರದಲ್ಲಿ, ಧನ ಪ್ರಾಪ್ತಿಯಾಗಲಿದೆ. ಜೀವನ ಸುಖಕರವಾಗಿರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯವಾಗಲಿದೆ. ಧನಾಗಮನದ ನಿರೀಕ್ಷೆ ಇಟ್ಟುಕೊಳ್ಳಬಹುದು. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸಿದರೆ ಸಕಲ ಬಯಕೆಗಳೂ ಈಡೇರುತ್ತದೆ.

 

Leave a Reply

Your email address will not be published.

Social Media Auto Publish Powered By : XYZScripts.com