Cricket : ಪೋರ್ಟ್ ಎಲಿಜಬೆತ್‍ನಲ್ಲಿ 5ನೇ ಏಕದಿನ : ಕೈಗೂಡುವುದೇ ಸರಣಿ ಜಯದ ಕನಸು..?

ಮಂಗಳವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪೋರ್ಟ್ ಎಲಿಜಬೆತ್ ನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ 5ನೇ ಏಕದಿನ ಪಂದ್ಯ ನಡೆಯಲಿದೆ. ಜೋಹಾನೆಸ್ ಬರ್ಗ್ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆತಿಥೇಯರು ಮತ್ತೊಂದು ಜಯದ ವಿಶ್ವಾಸದಲ್ಲಿದ್ದಾರೆ.

ಸರಣಿಯಲ್ಲಿ 3-1 ರಿಂದ ಮುನ್ನಡೆ ಹೊಂದಿರುವ ಟೀಮ್ ಇಂಡಿಯಾ 5ನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಕಳೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ಬ್ಯಾಟ್ಸಮನ್ ಡೇವಿಡ್ ಮಿಲ್ಲರ್ ಅವರ ಕ್ಯಾಚನ್ನು ಭಾರತದ ಶ್ರೇಯಸ್ ಅಯ್ಯರ್ ಕೈಚೆಲ್ಲಿದ್ದರು. ಲೆಗ್ ಸ್ಪಿನ್ನರ್ ಚಹಲ್ ಎಸೆದ ನೋಬಾಲ್ ನಲ್ಲಿ ಡೇವಿಡ್ ಮಿಲ್ಲರ್ ಬೋಲ್ಡ್ ಆಗಿದ್ದರು. ಇಂತಹುದೇ ಕೆಲವು ತಪ್ಪುಗಳಿಂದಾಗಿ ಭಾರತ ಸೋಲನುಭವಿಸಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com