ದೌರ್ಜನ್ಯಕ್ಕೊಳಗಾದ ಯುವತಿಗೆ ಶುದ್ಧೀಕರಣ ಮಾಡ್ತೀವಿ ಅಂತ ಈ ಊರಿನ ಜನ ಮಾಡಿದ್ದೇನು…?

ರಾಯ್‌ಪುರ : ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ನಮ್ಮ ಸಮಾಜ ಮೊದಲಿನಿಂದಲೂ ವಕ್ರವಾಗಿಯೇ ನೋಡುತ್ತಾ ಬಂದಿದೆ. ದೇಶ ಎಷ್ಟೇ ಮುಂದುವರಿದಿದ್ದರೂ ಅತ್ಯಾಚಾರ ಪ್ರಕರಣಗಳು, ಮಹಿಳೆಯರನ್ನು ನೋಡುವಂತಹ ಮನಸ್ಥಿತಿ ಬದಲಾಗಿಲ್ಲ.

ಇದಕ್ಕೆ ಪೂರಕ ಎಂಬಂತೆ ಛತ್ತೀಸ್‌ ಗಢದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಲೈಂಗಿಕ ಕಿರುಕುಳಕ್ಕೊಳಗಾಗಿದ್ದ 13 ವರ್ಷದ ಬಾಲಕಿಯಗೆ ಶುದ್ಧೀಕರಣ ಹೆಸರಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಅರ್ಧ ತಲೆ ಬೋಳಿಸಿದ್ದರೆ.

ಅದೇ ಗ್ರಾಮದ ಅರ್ಜುನ್‌ ಯಾದವ್‌ ಎಂಬಾತ ಬಾಲಕಿಗೆ ಕಿರುಕುಳ ನೀಡಿದ್ದ. ಇದಾದ ಬಳಿಕ ಮನೆಯವರಿಗೆ ವಿಷಯ ತಿಳಿದು ನ್ಯಾಯ ಕೊಡಿಸುವಂತೆ ಗ್ರಾಮದ ಮುಖಂಡರಿಗೆ ಮನವಿ ಮಾಡಿದ್ದರು. ಪಂಚಾಯ್ತಿ ಕರೆದಿದ್ದ ಊರಿನ ಹಿರಿಯರು ಅರ್ಜುನ್‌ಗೆ ಯಾವುದೇ ಶಿಕ್ಷೆ ನೀಡದೆ, ಬಾಲಕಿಗೆ ಅರ್ಧ ತಲೆ ಬೋಳಿಸಿದ್ದಾರೆ. ಜೊತೆಗೆ ಆಕೆಗೆ ಬಹಿಷ್ಕಾರ ಹಾಕಲೂ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಅರ್ಜುನ್‌ನನ್ನು ಪೊಲೀಸರು ಬಂಧಿಸಿದ್ದು, ಬಾಲಕಿಗೆ ಶಿಕ್ಷೆ ನೀಡಿದ್ದ ಊರಿನ ಮುಖಂಡರು ತಲೆ ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com