ಮುಂದಿನ ಚುನಾವಣೆಯಲ್ಲಿ BJP ಅಧಿಕಾರಕ್ಕೆ ಬರುವುದು ಶತಸಿದ್ಧ : ನಾಗಸಾಧುಗಳಿಂದ ಭವಿಷ್ಯ

ಬೆಳಗಾವಿ : ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಶಿವರಾತ್ರಿಯ ದಿನವೇ ಭವಿಷ್ಯ ನುಡಿದಿದ್ದಾರೆ. ಇದರಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಬೆಳಗಾವಿಯ ಹುಕ್ಕೇರಿಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳನ್ನು ನಾಗಸಾಧುಗಳು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯದಲ್ಲಿ ಉತ್ತರ ಪ್ರದೇಶದಂತೆಯೇ ಕಮಲ ಪಡೆ ಅಧಿಕಾರಕ್ಕೆ ಬರುತ್ತದೆ. ಇದು ಸತ್ಯ ಎಂದಿದ್ದಾರೆ.

ಮತ್ತೊಂದೆಡೆ ಶಿವರಾತ್ರಿಯ ಪ್ರಯುಕ್ತ ಹರಿದ್ವಾರದಿಂದ ನಾಗಸಾಧು ಬನಖಂಡಿ ಬಾಬಾ ಅವರು ಬೆಂಗಳೂರಿಗೆ ಆಗಮಿಸಿದ್ದು, ಅನೇಕ ರಾಜಕೀಯ ನಾಯಕರು ಅವರ ಭೇಟಿಗೆ ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com