ಮನೆಯಲ್ಲಿ ಗಂಡನಿಲ್ಲದ ವೇಳೆ ಪ್ರಿಯಕರನನ್ನು ಕರೆಸಿದ್ಲು….ಆತ ಮನೆಗೆ ಬಂದ ಮೇಲೆ ಆಗಿದ್ದೇನು ?

ಬೆಳಗಾವಿ : ಮದುವೆಯಾದ ಯುವತಿಯೊಬ್ಬಳು ಗಂಡನ ಮನೆಗೆ ಹೋದರೂ ಪ್ರಿಯಕರನನ್ನು ಮರೆಯಲು ಸಾಧ್ಯವಾಗದೆ ಗಂಡನ ಮನೆಗೇ ಆತನನ್ನು ಕರೆಸಿಕೊಂಡ ವೇಳೆ ಸಿಕ್ಕಿಬಿದ್ದ ಪರಿಣಾಮ ಇಬ್ಬರಿಗೂ ಸಾರ್ವಜನಿಕರು ಥಳಿಸಿರುವ ಘಟನೆ ಅಥಣಿ ತಾಲ್ಲೂಕಿನಲ್ಲಿ ನಡೆದಿದೆ.

ಗಂಡ ಊರಿನಲ್ಲಿಲ್ಲದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಗಂಡನ ಮನೆಯಲ್ಲಿ ಇಬ್ಬರೂ ಒಟ್ಟಿಗಿದ್ದ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮದುವೆಗೂ ಮುನ್ನ ಮಹಿಳೆಗೆ ವಿಠ್ಠಲ ಸಂಗಪ್ಪ ಎಂಬ ಯುವಕನ ಮಧ್ಯೆ ಪ್ರೀತಿ ಇತ್ತು. ಮನೆಯವರು ಒಪ್ಪದ ಕಾರಣ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದಳು. ಗಂಡನ ಮನೆಗೆ ಬಂದ ಮೇಲೂ ಪ್ರಿಯಕರನನ್ನು ಮರೆಯಲಾಗದೆ ಅವನನ್ನು ಮನೆಗೆ ಕರೆಸಿಕೊಂಡು, ಧರ್ಮದೇಟು ತಿಂದಿದ್ದಾರೆ.

ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com