ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು ? : HDK

ಬೆಂಗಳೂರು :  ರಾಹುಲ್‌ ಗಾಂಧಿ ಜವಾರಿ ಕೋಳಿ ಸೇವಿಸಿ ದೇವರ ದರ್ಶನ ಪಡೆದಿದ್ದಾರೆ. ಇವರೊಬ್ಬ ಎಲೆಕ್ಷನ್‌ ಹಿಂದೂ ಎಂದು ವಾಗ್ದಾಳಿ ನಡೆಸಿದ್ದ ಯಡಿಯೂರಪ್ಪಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದ್ದು, ಕೆಲ ದೇವರಿಗೆ ಮಾಂಸಾಹಾರವೇ ಪ್ರಿಯವಾದುದು. ಮನಸ್ಸು ಶುದ್ಧವಿಲ್ಲದೆ ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ ಎಂದಿದ್ದಾರೆ. ಇದಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ನಮ್ಮ ದೇಹವೇ ಒಂದು ಮಾಂಸದ ಮುದ್ದೆ. ಆದ್ದರಿಂದ ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಹೋದರೆ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

 

Leave a Reply

Your email address will not be published.