WATCH : ಕಣ್ಣೋಟ ಮಾತ್ರವಲ್ಲ, ಪ್ರಿಯಾ ಧ್ವನಿಗೂ ಮರುಳಾದ್ರು ಜನ : Video ವೈರಲ್

ಮಲಯಾಳಂ ‘ ಒರು ಅದರ್ ಲವ್ ‘ ಚಿತ್ರದ ‘ ಮಾಣಿಕ್ಯ ಮಲರಾಯ ಪೂವಿ ‘ ಹಾಡಿನಲ್ಲಿನ ಅಭಿನಯದ ಮೂಲಕ ಪ್ರಿಯಾ ಪ್ರಕಾಶ್ ವಾರಿಯರ್ ದೇಶದ ಹೊಸ ಸೆನ್ಸೇಷನ್ ಆಗಿ ರೂಪುಗೊಂಡಿದ್ದಾರೆ. ಈಕೆಯ ಮಾದಕ ಕಣ್ಣೋಟಕ್ಕೆ ಮಾರು ಹೋಗದವರೇ ಇಲ್ಲವೆನ್ನಬಹುದು.

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯ ಮಾತ್ರವಲ್ಲ, ಚೆನ್ನಾಗಿ ಹಾಡನ್ನೂ ಹಾಡ್ತಾರೆ. ಹೌದು, ಪ್ರಿಯಾ ಹಾಡಿದ ಹಿಂದಿ ಹಾಡುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನ ಈಕೆಯ ಧ್ವನಿಯನ್ನೂ ಮೆಚ್ಚತೊಡಗಿದ್ದಾರೆ.

ಪ್ರಿಯಾ ಹಾಡಿದ ಎ ದಿಲ್ ಹೈ ಮುಷ್ಕಿಲ್ ಚಿತ್ರದ ‘ ಚನ್ನಾ ಮೆರೆಯಾ ‘, ಮಲಯಾಳಂ ‘ ಈರನ್ ಮೇಘಮ್ ‘ ಹಾಡು ಹಾಗೂ ಆಶಿಕಿ 2 ಚಿತ್ರದ ‘ ತುಮ್ ಹಿ ಹೋ ‘ ಹಾಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹರಿದಾಡುತ್ತಿವೆ.

Leave a Reply

Your email address will not be published.