Tumkuru : JDS ಶಾಸಕರಿಂದ ಮಹಿಳೆಯರಿಗೆ ಕುಕ್ಕರ್‌ ಭಾಗ್ಯ……!

ತುಮಕೂರು : ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರನ್ನು ತಮ್ಮತ್ತ ಸೆಳೆಯಲು ರಾಜಕಾರಣಿಗಳು ಆಮಿಷ ಒಡ್ಡುವುದು ಸಾಮಾನ್ಯ. ಅಂತೆಯೇ ತುಮಕೂರಿನ ಶಾಸಕ ಸುರೇಶ್‌ ಬಾಬು  ಮಹಿಳೆಯರಿಗೆ ಕುಕ್ಕರ್ ಭಾಗ್ಯದ ಆಮಿಷ ಒಡ್ಡಿದ್ದಾರೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಮಹಿಳೆಯರಿಗೆ ಕುಕ್ಕರ್‌ ಹಂಚಿಕೆ ಮಾಡಲಾಗಿದ್ದು, ಮಹಿಳೆಯರು ಕುಕ್ಕರ್‌ ತೆಗೆದುಕಂಡು ಹೋಗುವ ದೃಶ್ಯಗಳು ಕಂಡು ಬಂದಿವೆ. ವಿಶ್ವ ಮಹಿಳಾ ದಿನಾಚರಣೆ ನೆಪದಲ್ಲಿ ಮಹಿಳೆಯರಿಗೆ ಕುಕ್ಕರ್‌ ಹಂಚಿಕೆ ಮಾಡಿರುವುದಾಗಿ ಸುರೇಶ್‌ ಬಾಬು ಹೇಳಿದ್ದು, ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

Leave a Reply

Your email address will not be published.