ರಾಯಚೂರಿನ ಹೋಟೆಲ್‌ನಲ್ಲಿ ಬಜ್ಜಿ, ಮಂಡಕ್ಕಿ ಸವಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ

ರಾಯಚೂರು : ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ ಪ್ರವಾಸದ ಮೂರನೇ ದಿನವಾದ ಇಂದು ರಾಯಚೂರಿನ ಚಿಕ್ಕ ಹೋಟೆಲ್‌ ಒಂದರಲ್ಲಿ ರಾಹುಲ್‌ ಗಾಂಧಿ ಉತ್ತರ ಕರ್ನಾಟಕದ ವಿಶೇಷ ಬಜ್ಜಿ ಹಾಗೂ ಒಗ್ಗರಣೆ ಮಂಡಕ್ಕಿಯನ್ನು ಸವಿದಿದ್ದಾರೆ.
ಹೊಸಪೇಟೆಯಿಂದ ಕಾಂಗ್ರೆಸ್‌ನ ಜನಾಶಿರ್ವಾದ ಯಾತ್ರೆ ಪ್ರಾರಂಭವಾಗಿದ್ದು, ಮೂರನೇ ದಿನವಾದ ಇಂದು ತಾಲ್ಲೂಕಿನ ಕಲ್ಮಠ ಬಳಿಯ ಚಿಕ್ಕ ಹೋಟೆಲ್ ಒಂದರಲ್ಲಿ ಬಜ್ಜಿ ಸವಿದಿದ್ದಾರೆ. ರಾಹುಲ್‌ ಗಾಂಧಿಯವರಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಸೇರಿದಂತೆ ಅನೇಕರು ಸಾಥ್‌ ನೀಡಿದ್ದಾರೆ.

 

Leave a Reply

Your email address will not be published.