ಪ್ರತಿ ಖಾತೆಗೆ 15 ಲಕ್ಷ ಹಾಕ್ತೀನಿ ಅಂದಿದ್ದ ಮೋದಿ, 10 ರೂಪಾಯಾದ್ರೂ ಹಾಕಿದ್ದಾರಾ? : ರಾಗಾ

ರಾಯಚೂರು : ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ‘ ಬಡವರಿಗಾಗಿ ನಾವು ಇಂದಿರಾ ಕ್ಯಾಂಟಿನ್ ಆರಂಭ ಮಾಡಿದ್ದೇವೆ. ಅದರಂತೆ ದೇಶದ ಬಡವರಿಗೆ ನೀವು ಕ್ಯಾಂಟಿನ್ ಆರಂಭಿಸಿ ‘ ಎಂದ ರಾಹುಲ್ ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟಿನ್ ಬಗ್ಗೆ ಹೊಗಳಿದರು.

‘ ಪ್ರಧಾನಿ ಮೋದಿ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತೀರಿ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗ ಹಿಂದಕ್ಕೆ ನೋಡುತ್ತಾರೆ. ಇನ್ನು ಮೇಲೆ ಎಡ, ಬಲಕ್ಕೆ ನೋಡಿಕೊಳ್ಳಿ ಪ್ರಧಾನಿ ಮೋದಿ. ಯಾಕೆಂದರೆ ಯಡಿಯೂರಪ್ಪ ಸೇರಿದಂತೆ ಹಲವರು ಕುಳಿತಿರುತ್ತಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದರು ಎಂದು ಮರೆಯಬೇಡಿ. ಸಾಕಷ್ಟು ಜನ ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿದ್ದರು ನಿಮ್ಮವರು.

371(J) ಜಾರಿಗೆ ಹೈದ್ರಾಬಾದ್ ಕರ್ನಾಟಕದ ಜನ ಬೇಡಿಕೆ ಇಟ್ಟಿದ್ದಿರಿ. ಅದನ್ನು ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ಗಮನಕ್ಕೆ ನಾವು ತಂದೆವು. ಆದರೆ ಅಡ್ವಾಣಿ ಅದನ್ನು ಜಾರಿ ಮಾಡಲು ಆಗಲ್ಲ ಎಂದು ಹೇಳಿದರು. ಆದರೆ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ 371 ಜಾರಿಗೆ ತಂದೆವು. 371 ಜಾರಿಗೆ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಶ್ರಮಿಸಿದರು. 371 ಜಾರಿಯಾದ ಬಳಿಕ ನಾಲ್ಕು ಸಾವಿರ ಅನುದಾನ ಖರ್ಚು ಮಾಡಲಾಗುತ್ತಿದೆ. 20 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಬೀದರ್, ಕೊಪ್ಪಳ, ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜ್ ಮಾಡಿದ್ದೇವೆ.

ಪ್ರಧಾನಿ ಮೋದಿ 15 ಲಕ್ಷ ರೂಪಾಯಿ ಪ್ರತಿ ಖಾತೆಗೆ ಜಮಾ ಮಾಡುತ್ತೇನೆ ಎಂದಿದ್ದರು. 10 ರೂಪಾಯಿಯಾದರೂ ನಿಮ್ಮ ಖಾತೆಗೆ ಹಾಕಿದ್ದಾರಾ? ಎಂದು ಸಮಾವೇಶದಲ್ಲಿದ್ದ ಜನರಿಗೆ ರಾಹುಲ್ ಗಾಂಧಿ ಪ್ರಶ್ನಿಸಿದರು.

ದೇವದುರ್ಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ‘ ಟಾಟಾ ಕಂಪನಿಗೆ ಪ್ರಧಾನಿ ಮೋದಿ 33 ಸಾವಿರ ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ಉದ್ಯಮಿಗಳಿಗೆ ನೀಡಿದ್ದಾರೆ. MNRGEಗೆ ನಮ್ಮ ಸರ್ಕಾರ ನೀಡಿದ್ದ ಅನುದಾನದಷ್ಟು ಹಣವನ್ನು ಒಂದು ಕಂಪನಿಗೆ ನೀಡಿದ್ದಾರೆ. ಬರೀ ನ್ಯಾನೋ ಕಾರು ಸ್ಥಾಪಿಸಲು 33 ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ. ಒಂದೇ ಒಂದು ನ್ಯಾನೋ ಕಾರು ಕಾಣಿಸುತ್ತ..? ‘ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.

‘ ಸಿಎಂ ಸಿದ್ದರಾಮಯ್ಯ ಸರ್ಕಾರ ದಲಿತರಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 27 ಸಾವಿರ ಕೋಟಿ ನೀಡಿದ್ದಾರೆ. ಆದರೆ ದೇಶದ ದಲಿತರಿಗೆ ಬರೀ 54 ಸಾವಿರ ಕೋಟಿ ಮೋದಿ ನೀಡಿದ್ದಾರೆ. ದೇಶದ 54 ಸಾವಿರ ಕೋಟಿಯ ಅರ್ಧದಷ್ಟು ಹಣವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ‘ ಎಂದರು.

 

Leave a Reply

Your email address will not be published.