WATCH : ಈಕೆಯ ಕಣ್ಣೋಟಕ್ಕೆ ನೆಟ್ಟಿಗರು ಫಿದಾ : ಯಾರು ಈ ಪ್ರಿಯಾ ಪ್ರಕಾಶ್ ವಾರಿಯರ್..?

‘ ಒರು ಅದರ್ ಲವ್ ‘ ಮಲಯಾಳಂ ಚಿತ್ರದ ‘ ಮಾಣಿಕ್ಯ ಮಲಾರಾಯ ಪೂವಿ ‘ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ಶಾಲೆಯ ಆವರಣದಲ್ಲಿ ಹದಿಹರೆಯದ ಹುಡುಗ ಹುಡಗಿಯರ ನಡುವೆ ನಡೆಯುವ ಪ್ರೇಮ ಪ್ರಸಂಗಗಳನ್ನು ಚಿತ್ರಿಸುತ್ತದೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಹಾಗೂ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ಈ ಹಾಡಿನಲ್ಲಿ ತಮ್ಮ ಮಾದಕ ಕಣ್ಣುಗಳ ಅಭಿವ್ಯಕ್ತಿಯ ಮೂಲಕ ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ದಿನಕ್ಕೆ ದೇಶದೆಲ್ಲೆಡೆ ಫೇಮಸ್ ಆಗಿದ್ದಾರೆ. ಈಕೆಯ ಕಣ್ಣೋಟಕ್ಕೆ ಸಾಮಾಜಿಕ ಜಾಲತಾಣದ ಜನರು ಫಿದಾ ಆಗಿದ್ದಾರೆ. ಫೆಬ್ರುವರಿ 9 ರಂದು ಬಿಡುಗಡೆಯಾದ ಈ ಹಾಡು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿದ್ದು, ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಹಿಟ್ಸ್ ಬಂದಿವೆ.

Image result for priya prakash varrier

Image result for priya prakash varrier

Image result for priya prakash varrier

ಸೋಶಿಯಲ್ ಮೀಡಿಯಾದ ಹೊಸ ಸೆನ್ಸೇಷನ್ ಆಗಿ ರೂಪುಗೊಂಡಿರುವ 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ಜನಿಸಿದ್ದು ಕೇರಳದ ತ್ರಿಶೂರಿನಲ್ಲಿ. ಪ್ರಿಯಾ ತ್ರಿಶೂರಿನ ವಿಮಲಾ ಕಾಲೇಜಿನಲ್ಲಿ ಬಿ. ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. ಒರು ಆದಾರ್ ಚಿತ್ರದಲ್ಲಿಯೂ ಸಹ ಪ್ರಿಯಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com