ಸಾವಿನಲ್ಲೂ ಒಂದಾದ ತಂದೆ – ಮಗ : ಮನಕಲಕುವ ಘಟನೆಗೆ ಸಾಕ್ಷಿಯಾಯ್ತು ಮೈಸೂರು

ಮೈಸೂರು : ತಂದೆ ಮಗ ಇಬ್ಬರೂ ಸಾವಿನಲ್ಲೂ ಒಂದಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಮಗ ಭೈರೇಗೌಡ ಎಂಬುವವರು ಕ್ಯಾನ್ಸರ್‌ ರೋಗದಿಂದ ಸಾವಿಗೀಡಾಗಿದ್ದರು, ಮಗನ ಶವಯಾತ್ರೆ ನಡೆಸುವ ವೇಳೆ ತಂದೆ ಸಹ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಭೈರೇಗೌಡ ಅವರ ಶವಪೂಜೆಯನ್ನು ತಂದೆ ಪುಟ್ಟೇಗೌಡ ನೆರವೇರಿಸಿ, ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ತಂದೆ ಹಾಗೂ ಮಗನ ಶವಗಳಿಗೆ ಒಂದೇ ಚಿತೆಯಲ್ಲಿ ಅಗ್ನಿಸ್ಪರ್ಶ ನೆರವೇರಿಸಲಾಗಿದೆ.

Leave a Reply

Your email address will not be published.