ಕರಾವಳಿಯ ಕಂಬಳ ಕ್ರೀಡೆಗೆ ತಡೆ ನೀಡಲು ಸಾಧ್ಯವಿಲ್ಲ : ಸುಪ್ರೀಂಕೋರ್ಟ್‌

ದೆಹಲಿ : ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಇದರಿಂದಾಗಿ ರಾಜ್ಯದ ಜನತೆಗೆ ಗೆಲುವು ಸಿಕ್ಕಂತಾಗಿದೆ.
ಕಂಬಳ ಕ್ರೀಡೆಗೆ ತಡೆ ನೀಡುವಂತೆ ಕೋರಿ ಪ್ರಾಣಿ ದಯಾ ಸಂಘ  (PETA) ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಕಂಬಳ ಕ್ರೀಡೆಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಈ ಕುರಿತು ಅಂತಿಮ ಹಂತದ ವಿಚಾರಣೆಯನ್ನು ಮಾರ್ಚ್‌ 12ಕ್ಕೆ ನಿಗಧಿ ಪಡಿಸಿದ್ದಾರೆ.
ರಾಜ್ಯ ಸರ್ಕಾರ ಕಂಬಳ ಕ್ರೀಡೆಯನ್ನು ಕಾನೂನು ಬದ್ದಗೊಳಿಸಿದ್ದು, ಇದಕ್ಕೆ ಪ್ರಾಣಿದಯಾ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಇದು ಸಂವಿಧಾನದ ನಿಯಮಗಳಿಗೆ ವಿರುದ್ದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com