ಪ್ರಾಣಿಬಲಿ ವಿರೋಧಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ : ದೇವರ ಫೋಟೋ ಸುಟ್ಟು ಆಕ್ರೋಶ

ಜೇವರ್ಗಿ : ಜಾತ್ರಾ ಮಹೋತ್ಸದಲ್ಲಿ ಪ್ರಾಣಿ ಬಲಿ ನೀಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮೇಲ್ಜಾತಿಯವರು, ಪರಿಶಿಷ್ಟ ಜಾತಿಯ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ಜೇವರ್ಗಿಯಲ್ಲಿ ನಡೆದಿದೆ.

ಹಲ್ಲೆಯನ್ನು ಖಂಡಿಸಿ ದಲಿತರು, ಇಂದು ಈ ಘಟನೆಗೆ ಕಾರಣವಾದ ಹಿಂದೂ ದೇವರ ಫೋಟೋಗಳನ್ನು ಸ್ವಯಂ ಪ್ರೇರಿತರಾಗಿ ತಂದು ರಸ್ತೆಯಲ್ಲಿ ಸಾರ್ವಜನಿಕವಾಗಿ ಎಸೆದಿದ್ದಾರೆ. ಅಲ್ಲದೆ ನಮ್ಮ ಮೇಲಿನ ಹಲ್ಲೆಗೆ ಹಿಂದೂ ದೇವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ದಲಿತ ನಾಯಕ ವಿಠ್ಠಲ ದೊಡ್ಡಮನಿ ಹಾಗೂ ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಜಿ. ಯೆಲಸಂಗಿ ಅವರ ನೇತೃತ್ವದಲ್ಲಿ ದೇವರ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.