ನ್ಯಾ. ಲೋಯಾ ಹೃದಯಾಘಾತದಿಂದ ಸಾವಿಗೀಡಾಗಿಲ್ಲ….ಸ್ಫೋಟಕ ಸತ್ಯ ಬಿಚ್ಚಿಟ್ಟ ತಜ್ಞರು

ದೆಹಲಿ : ಅಮಿತ್ ಶಾ ಭಾಗಿಯಾಗಿದ್ದಾರೆನ್ನಲಾದ ಸೊಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ ಅವರ ನಿಗೂಢ ಸಾವಿನ ಕುರಿತು ಸಂಶಯ ಮತ್ತಷ್ಟು ಹೆಚ್ಚಾಗಿದೆ.

ಲೋಯಾ ಸಾವಿಗೆ ಸಂಬಂಧಿಸಿದಂತೆ ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಭಾರತದ ಪ್ರಸಿದ್ಧ ಫೋರೆನ್ಸಿಕ್‌ ತಜ್ಞ ಡಾ. ಆರ್‌.ಕೆ ವರ್ಮಾ, ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿಲ್ಲ, ವರದಿಯಲ್ಲಿ ಆ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಯಾ ಅವರ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ರಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲ್ಪಟ್ಟ ಲೋಯಾ ಅವರ ಒಳ ಅಂಗಾಂಗಗಳ ಪರೀಕ್ಷೆಯ ವರದಿಯನ್ನು ಶರ್ಮಾ ಪರೀಕ್ಷಿಸಿದ್ದು, ಹೃದಯಾಘಾತದಿಂದ ಅವರು ಮೃತಪಟ್ಟಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

ಇನ್ನು ಈ ಕುರಿತು ಖ್ಯಾತ ವಕೀಲ ಪ್ರಶಾಂತ್‌ ಭೂಷಣ್ ಸಹ ಮಾಹಿತಿ ನೀಡಿದ್ದು, ಲೋಯಾ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಅಥವಾ ಅವರ ತಲೆಗೆ ಹೊಡೆದು ಕೊಲ್ಲಲಾಗಿದೆ ಎಂದು ವರದಿಯಲ್ಲಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com