ನಗುವಿಗೆ GST ಇಲ್ಲ : ನಾನು ನಗಲು ಯಾರ ಅಪ್ಪಣೆಯೂ ಬೇಕಿಲ್ಲ : ಸಂಸದೆ ರೇಣುಕಾ ಚೌಧರಿ

ದೆಹಲಿ : ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಅವರನ್ನು ರಾಮಾಯಣದಲ್ಲಿ ಬರುವ ಶೂರ್ಪನಕಿಗೆ ಹೋಲಿಸಿದ್ದಕ್ಕೆ ರೇಣುಕಾ ಚೌಧರಿ ತಿರುಗೇಟು ನೀಡಿದ್ದಾರೆ.

ನಗುವಿಗೆ ಯಾವುದೇ ಜಿಎಸ್‌ಟಿ ಇಲ್ಲ. ಆದ್ದರಿಂದ ನಾನು ನಗಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದಿದ್ದಾರೆ. ಮೋದಿ ಅವರ ಹೇಳಿಕೆ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ಏನೆಂಬುದನ್ನು ಸೂಚಿಸುತ್ತದೆ. ನಾನು ಐದು ಬಾರಿ ಸಂಸದೆಯಾಗಿದ್ದೇನೆ.  ನನ್ನ ನಗುವನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿಲ್ಲ ಎಂದಿದ್ದಾರೆ.

ನಾನು ನನ್ನ ನಗುವಿನಿಂದಲೇ ಆಡಳಿತದ ಬಗ್ಗೆ ಪ್ರಶ್ನೆ ಮಾಡಿದ್ದೆ. ಸಂಸತ್ತಿನಲ್ಲಿ ಕಾನೂನನ್ನು ಮಾಡಲಾಗುತ್ತದೆ. ಆದರೆ ನಾವು ಕಾನೂನು ತಜರೇ ಅಂಧಕಾರದಲ್ಲಿದ್ದಾರೆ. ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಶಿಕ್ಷಣ ಅವರಿಗೆ ಅಗತ್ಯವಿದೆ. ಮಹಿಳೆಯರು ಪುರುಷರಿಗೆ ಸಮಾನರು ಎನ್ನುವ ಅವರೇ ಹೀನಾಯವಾಗಿ ನೋಡುತ್ತಾರೆ. ಇದಕ್ಕೇನನ್ನುವುದು ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com