Cricket : ಗಂಗೂಲಿ-ದ್ರಾವಿಡ್ ದಾಖಲೆ ಸರಿಗಟ್ಟಿದ Kohli-Dhawan ಜೋಡಿ

ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ ಜೋಹಾನೆಸ್ಬರ್ಗ್ ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಎಡಗೈ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ 2ನೇ ವಿಕೆಟ್ ಗೆ 158 ರನ್ ಜೊತೆಯಾಟವಾಡಿದರು. ಶತಕ ಬಾರಿಸಿದ ಶಿಖರ್ 109 ರನ್ ಗಳಿಸಿದರೆ, ಅರ್ಧತಕ ಸಿಡಿಸಿದ ಕೊಹ್ಲಿ 75 ರನ್ ಗಳಿಸಿದರು.

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ವಿರಾಟ್ ಹಾಗೂ ಶಿಖರ್ ಮಧ್ಯದ 8ನೇ ಬಾರಿಯ ಶತಕದ ಜೊತೆಯಾಟವಾಗಿದೆ. ಈ ಮೂಲಕ ಕೊಹ್ಲಿ-ಧವನ್ ಜೋಡಿ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 2ನೇ ವಿಕೆಟ್ ಗೆ 8 ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಈಗ ವಿರಾಟ್-ಧವನ್ ಜೋಡಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

 

Leave a Reply

Your email address will not be published.